ದಸರಾ ಕೊನೆ ದಿನ ಪ್ರೇಕ್ಷಕರು ದಾಂಗುಡಿ: ರಾಜೇಶ್ ಕೃಷ್ಣನ್ ಹಾಡಿನ‌ ಮೋಡಿ!! - Mahanayaka
5:29 PM Wednesday 1 - January 2025

ದಸರಾ ಕೊನೆ ದಿನ ಪ್ರೇಕ್ಷಕರು ದಾಂಗುಡಿ: ರಾಜೇಶ್ ಕೃಷ್ಣನ್ ಹಾಡಿನ‌ ಮೋಡಿ!!

rajesh krishnan
20/10/2023

ಚಾಮರಾಜನಗರ: ಪ್ರೇಕ್ಷಕರನ್ನು ಹಿಡಿದಿಡಲು ಚಾಮರಾಜನಗರ ಜಿಲ್ಲಾ ದಸರಾದ ಕೊನೆಯ ದಿನ ರಾಜೇಶ್ ಕೃಷ್ಣನ್ ಸಂಗೀತ ಯಶಸ್ವಿಯಾಯಿತು. ಆರಂಭದ ಮೂರು ದಿನ ಪ್ರೇಕ್ಷಕರ ಕೊರತೆ ಎದುರಿಸಿದ್ದ ಕಾರ್ಯಕ್ರಮಗಳಿಗೆ ರಾಜೇಶ್ ಕೃಷ್ಣನ್ ಕಾರ್ಯಕ್ರಮ ಮೆರುಗು ನೀಡಿತು.

ರಥದ ಬೀದಿ, ದೇವಾಲಯ ಮುಂಭಾಗ, ಚಾಮರಾಜೇಶ್ವರ ಉದ್ಯಾನವನದ ತನಕವೆಲ್ಲಾ ಜನರು ನಿಂತು ರಾಜೇಶ್ ಕೃಷ್ಣನ್ ಅವರ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದರು. ಯಾರೋ ಕಣ್ಣಲ್ಲಿ ಕಣ್ಣನಿಟ್ಟು ಎಂಬ ಹಾಡಿನ ಮೂಲಕ ಸಂಗೀತ ರಸಸಂಜೆ ಆರಂಭಿಸಿದ ರಾಜೇಶ್ ಕೃಷ್ಣನ್ ಓ..ಗೆಳೆಯ-ಜೀವನ ಗೆಳೆಯ,  ಉಸಿರೇ-ಉಸಿರೇ ಹಾಡಿನ ಮೂಲಕ ಸಂಗೀತ ರಸದೌತಣ ಬಡಿಸಿದರು‌. ರುಕ್ಕಮ್ಮ ಚಿತ್ರಗೀತೆಗಂತೂ ಜನರು ಹುಚ್ಚೆದ್ದು ಕುಣಿದರು.

ಇತ್ತೀಚಿನ ಸುದ್ದಿ