ಬಾಂಬೆ ಫ್ರೆಂಡ್ಸ್ ಸಚಿವರಿಗೆ ಸಿಡಿ ನಡುಕ | ಡಿ.ವಿ. ಸದಾನಂದ ಗೌಡ ಎಂತಹ ಹೇಳಿಕೆ ನೀಡಿದ್ದಾರೆ ನೋಡಿ - Mahanayaka
4:19 AM Wednesday 11 - December 2024

ಬಾಂಬೆ ಫ್ರೆಂಡ್ಸ್ ಸಚಿವರಿಗೆ ಸಿಡಿ ನಡುಕ | ಡಿ.ವಿ. ಸದಾನಂದ ಗೌಡ ಎಂತಹ ಹೇಳಿಕೆ ನೀಡಿದ್ದಾರೆ ನೋಡಿ

06/03/2021

ಬೆಂಗಳೂರು:  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ  ಬಾಂಬೆ ಫ್ರೆಂಡ್ಸ್ ಸಚಿವ ಮಂಡಳಿಗೆ ನಡುಕ ಶುರುವಾಗಿದ್ದು, ತಮ್ಮ ವಿರುದ್ಧದ ಮಾನಹಾನಿಕರ ವಿಡಿಯೋ ಬಿಡುಗಡೆ ಮಾಡಬಾರದು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಲಿಕೆ ನೀಡಿದ್ದಾರೆ.

ಸಚಿವರು ಈ ರೀತಿಯಾಗಿ ಕೋರ್ಟ್ ಗೆ ಹೋಗಿರುವುದರಿಂದ  ಏನೋ ವಿಷಯ ಇರಬೇಕು, ಅನಗತ್ಯವಾಗಿ ಯಾರೂ ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ ಎನ್ನುವಅನುಮಾನ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

ಅನಗತ್ಯವಾಗಿ  ಗೋಜಲು ಸೃಷ್ಟಿಸಬಾರದು. ಹೀಗೆ ಅನಗತ್ಯವಾಗಿ ಕೋರ್ಟ್ ಮೊರೆ ಹೋದರೆ,  ಏನೋ ವಿಷಯ ಇರಬೇಕು ಅದಕ್ಕೆ ಹೋಗಿದ್ದಾರೆ ಎನ್ನುವ ಗೊಂದಲ ಸೃಷ್ಟಿಯಾಗುತ್ತದೆ ಎಂದು ಬಾಂಬೆ ಫ್ರೆಂಡ್ಸ್ ಸಚಿವರಿಗೆ ಟಾಂಗ್ ನೀಡಿದ್ದಾರೆ.

ಇತ್ತೀಚಿನ ಸುದ್ದಿ