ಧ್ವನಿವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ: ಎಷ್ಟು ಗಂಟೆವರೆಗೆ ಧ್ವನಿವರ್ಧಕ ಬಳಸಬಹುದು?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಧ್ವನಿವರ್ಧಕದ ಚರ್ಚೆ ಜೋರಾಗಿದೆ. ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯದೆ ಹೋದರೆ ನಾವೂ ಸುಪ್ರಭಾತ ಹಾಕುವುದನ್ನು ನಿಲ್ಲಿಸಲ್ಲ ಎಂದು ಹಿಂದೂಪರ ಸಂಘಟನೆಗಳು ಅಭಿಯಾನ ಶುರು ಮಾಡಿದ ಬೆನ್ನಲ್ಲೆ ಸರ್ಕಾರದಿಂದ ಧ್ವನಿವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.
ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಡೆಸಿಬಲ್ ಜೊತೆಗೆ ರಾತ್ರಿ 10ರಿಂದ ಬೆಳಗ್ಗೆ 6 ರ ತನಕ ಧ್ವನಿವರ್ಧಕ ಬಳಸುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇದರ ಜೊತೆಗೆ ಯಾವ್ಯಾವ ಪ್ರದೇಶದಲ್ಲಿ ಎಷ್ಟೆಷ್ಟು ಡೆಸಿಬಲ್ ಇರಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಇನ್ನು ಹದಿನೈದು ದಿನಗಳೊಳಗೆ ಲೌಡ್ ಸ್ಪೀಕರ್ ಬಳಕೆಯ ವಿಚಾರವಾಗಿ ಅನುಮತಿ ಪಡೆಯಲು ಸೂಚನೆ ನೀಡಿದೆ. ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 75 ಡೆಸಿಬಲ್ ರಾತ್ರಿ 70 ಡೆಸಿಬಲ್ ಸದ್ದು ಇರಬೇಕಾಗುತ್ತದೆ. ಜನವಸತಿ ಪ್ರದೇಶದಲ್ಲಿ ಬೆಳಗ್ಗೆ 55 ಇದ್ರೆ ರಾತ್ರಿ 45 ಡೆಸಿಬಲ್ ಇರಬೇಕು. ವಾಣಿಜ್ಯ ಪ್ರದೇಶದಲ್ಲಿ ಬೆಳಗ್ಗೆ 65 ಡೆಸಿಬಲ್ ಹಾಗೂ ರಾತ್ರಿ 70 ಡೆಸಿಬಲ್ ಇರಬೇಕು.
ನಿಶ್ಯಬ್ಧ ವಲಯದಲ್ಲಿ ಬೆಳಗ್ಗೆ 50 ಇದ್ರೆ ರಾತ್ರಿ 40 ಇರಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಧ್ವನಿವರ್ಧಕದ ಬಳಕೆಗೆ ಅವಕಾಶ ನೀಡಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವಿದ್ಯುತ್ ಸ್ಪರ್ಶದಿಂದ ಜೂ.ರವಿಚಂದ್ರನ್ ಸಾವು
ಮೈಸೂರು ಮೃಗಾಲಯ: ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ!
ಅಸಾನಿ ಚಂಡಮಾರುತ: ಸಮುದ್ರದಲ್ಲಿ ತೇಲಿ ಬಂದ ಚಿನ್ನದ ಬಣ್ಣದ ರಥ!
ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ
ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸಲಾಗುತ್ತಿದೆ: ಸಚಿವ ಆನಂದ್ ಸಿಂಗ್