ರಕ್ತದಾನ ಶಿಬಿರ ಸಮಾಜಕ್ಕೆ ಮಾದರಿ ಸಂದೇಶ | ದಯಾನಂದ ಶೆಟ್ಟಿ - Mahanayaka
12:08 PM Saturday 14 - December 2024

ರಕ್ತದಾನ ಶಿಬಿರ ಸಮಾಜಕ್ಕೆ ಮಾದರಿ ಸಂದೇಶ | ದಯಾನಂದ ಶೆಟ್ಟಿ

28/02/2021

ಮಂಗಳೂರು:  ಡಿವೈಎಫ್‌ ಐ ಉರ್ವಸ್ಟೋರ್ ಘಟಕ ಹಾಗೂ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಕದ್ರಿ ಹಿಲ್ಸ್ ಇವರ ಜಂಟಿ ಆಶ್ರಯದಲ್ಲಿ ಎ.ಜೆ.ಹಾಸ್ಪಿಟಲ್ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕದ್ರಿಹಿಲ್ಸ್‌ನ ರತ್ನಾಕರ ಪಿ ಹಾಗೂ ಜಗದೀಶ್ ಪೈರವರು ಉದ್ಘಾಟನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿವೈಎಫ್‌ ಐ‌ನ ಜಿಲ್ಲಾ ಮುಖಂಡರು ದಯಾನಂದ ಶೆಟ್ಟಿ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ, ರಕ್ತದಾನ ಒಂದು ಶ್ರೇಷ್ಠ ದಾನದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ನಾನು ಅಭಿನಂದಿಸುತ್ತೇನೆ. ರಕ್ತದಾನ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಾ ಇದ್ದೇನೆ. ರಕ್ತವನ್ನು ಯಾವುದೇ ಕೃತಕವಾಗಿ ಪಡೆಯುವುದಕ್ಕೆ ಸಾಧ್ಯವಿಲ್ಲ, ಮನುಷ್ಯನ ದೇಹದಿಂದಲೇ ಪಡೆಯಬೇಕು. ಈ ನಿಟ್ಟಿನಲ್ಲಿ ಶಿಬಿರ ಮಾಡುವಂತಹದು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹೋಗಿ ಬ್ಲಡ್ ಬ್ಯಾಂಕ್‌ಗಾಗಿ ಹೊಂದಿಸಿಕೊಳ್ಳುವಂತಹದು, ರಕ್ತದಾನದ ಕ್ಷೇತ್ರದಲ್ಲೊಂದು ಕೆಲಸವಾಗಿದೆ. ಡಿವೈಎಫ್‌ ಐ ಸಂಘಟನೆಯವರು ಉಚಿತವಾಗಿ ರಕ್ತದಾನ ಶಿಬಿರ ಮಾಡುತ್ತಾ ಇದ್ದಾರೆ. ಅದೇ ರೀತಿ ಸಮಾಜಕ್ಕೆ ಮುಖ್ಯವಾದ ಸಂದೇಶ ಈ ರಕ್ತದಾನ ಶಿಬಿರ ಮಾದರಿಯಾಗಿದೆ ಎಂದು ಅವರು ಹೇಳಿದರು.

ಈ ವೇದಿಕೆಯಲ್ಲಿ ಡಿವೈಎಫ್‌ ಐ ಉರ್ವಸ್ಟೋರ್ ಘಟಕದ ಪ್ರಶಾಂತ್ ಎಂ.ಬಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐನ ಮುಖಂಡರಾದ ರಾಜೇಶ್ ಕುಲಾಲ್, ಎ.ಜೆ ಬ್ಲಡ್ ಬ್ಯಾಂಕ್‌ನ ಮೆನೇಜರ್ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಮೊದಲಿಗೆ ಡಿವೈಎಫ್‌ ಐ ಮುಖಂಡರಾದ ಪ್ರಶಾಂತ್ ಆಚಾರ್ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

whatsapp

ಇತ್ತೀಚಿನ ಸುದ್ದಿ