ಡಿವೈಎಫ್ ಐ ಕಾರ್ಯಕರ್ತನ ಮೇಲೆ ಆರೆಸ್ಸೆಸ್ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ | ಡಿವೈಎಫ್ ಐ ಕಾರ್ಯಕರ್ತನ ಸ್ಥಿತಿ ಚಿಂತಾಜನಕ
ಚಥನೂರ್: ಡಿವೈಎಫ್ ಐ ಕಾರ್ಯಕರ್ತನ ಮೇಲೆ ಮೂವರು ಆರೆಸ್ಸೆಸ್ ಕಾರ್ಯಕರ್ತರು ಭೀಕರವಾಗಿ ದಾಳಿ ನಡೆಸಿದ ಘಟನೆ ನಡೆದಿದ್ದು, ಡಿವೈಎಫ್ ಐ ಕಾರ್ಯಕರ್ತರನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಪರಿಪ್ಪಳ್ಳಿ ಪಂಬೂರಂ ಕರುಣಾ ಸೆಂಟ್ರಲ್ ಶಾಲೆಯ ಬಳಿಯಲ್ಲಿ ಈ ಘಟನೆ ನಡೆದಿದೆ. ಪಂಬೂರಂ ಚಲ್ಲಿಯ ವಿಷ್ಣು ವಿಹಾರ್ ನಿವಾಸಿ ವಿನೀರ್(22) ಗಂಭೀರವಾಗಿ ಗಾಯಗೊಂಡಿರುವವರಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಡಿವೈಎಫ್ ಐ ಸಂಘಟನೆಯ ಸಭೆಯಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ವಿನೀತ್ ಗೆ ದಪ್ಪನೆಯ ಚೂರಿಯಲ್ಲಿ ಇರಿಯಲಾಗಿದ್ದು, ವಿನೀತ್ ನ ಬೊಬ್ಬೆ ಕೇಳಿ ಸ್ಥಳೀಯರು ಓಡಿಕೊಂಡು ಬಂದರೂ, ದುಷ್ಕರ್ಮಿಗಳು ಸ್ಥಳದಿಂದ ಸರಿಯದೇ ಮತ್ತೆ ಮತ್ತೆ ಹಲ್ಲೆ ನಡೆಸುತ್ತಲೇ ಇದ್ದರು ಎಂದು ಕೇರಳದ ಮಾಧ್ಯಮವೊಂದು ವರದಿ ಮಾಡಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಬರುವವರೆಗೂ ಆರೋಪಿಗಳು ವಿನೀತ್ ನ ಮೇಲೆ ಹಲ್ಲೆ ನಡೆಸುತ್ತಲೇ ಇದ್ದರು. ಪೊಲೀಸರು ಬರುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳು ವಿನೀತ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಈತ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ಇನ್ನೂ ವಿನೀತ್ ಈ ಹಿಂದೆ ತನ್ನ ತಂಡದೊಂದಿಗೆ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದ ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.