ಡಿವೈಎಫ್ ಐ ನಾಯಕನ ಮೇಲೆ ದುಷ್ಕರ್ಮಿಗಳಿಂದ ಆಸಿಡ್ ದಾಳಿ - Mahanayaka
2:13 AM Wednesday 11 - December 2024

ಡಿವೈಎಫ್ ಐ ನಾಯಕನ ಮೇಲೆ ದುಷ್ಕರ್ಮಿಗಳಿಂದ ಆಸಿಡ್ ದಾಳಿ

dyfi
11/04/2021

ಎರ್ನಾಕುಲಂ: ಡಿವೈಎಫ್ ಐ ನಾಯಕರೋರ್ವರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದ್ದು,  ಅವರ ಮನೆಯ ಬಳಿಯಲ್ಲಿಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಡಿವೈಎಫ್ ಐನ ಕೋಥಮಂಗಲಂ ಬ್ಲಾಕ್ ಅಧ್ಯಕ್ಷ ಜಿಯೋ ಪಿಯಸ್ ಆಸಿಡ್ ದಾಳಿಗೊಳಗಾದವರಾಗಿದ್ದಾರೆ.  ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ತಮ್ಮ ರಾಮಲ್ಲೂರ್ ನಲ್ಲಿರುವ ಮನೆಗೆ ಬರುತ್ತಿದ್ದ ವೇಳೆ ತಡೆದ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ್ದಾರೆ.

ಪಿಯುಸ್  ತಮ್ಮ ಮನೆಯ ಬಳಿ ಬರುತ್ತಿದ್ದಂತೆಯೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ತಕ್ಷಣವೇ  ಜಿಯೋ ಪಿಯೂಸ್ ಅವರನ್ನು ಕೋಥಮಂಗಲಂ ಧರ್ಮಗಿರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಎರ್ನಾಕುಲಂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ