ಸೆ.27ರಂದು ಭಾರತ ಬಂದ್: ಈ ಬಾರಿ ಬಂದ್ ತೀವ್ರ ರೀತಿಯಲ್ಲಿ ನಡೆಯಲಿದೆ | ಕೋಡಿಹಳ್ಳಿ ಚಂದ್ರಶೇಖರ್ - Mahanayaka
12:06 PM Sunday 22 - September 2024

ಸೆ.27ರಂದು ಭಾರತ ಬಂದ್: ಈ ಬಾರಿ ಬಂದ್ ತೀವ್ರ ರೀತಿಯಲ್ಲಿ ನಡೆಯಲಿದೆ | ಕೋಡಿಹಳ್ಳಿ ಚಂದ್ರಶೇಖರ್

bharath bandh
25/09/2021

ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಸೆ.27ರಂದು ರೈತ ಸಂಘಟನೆಗಳು ಕರೆ ನೀಡಿದ್ದು, ಕರ್ನಾಟಕದಲ್ಲಿ ಕೂಡ ಈ ಬಾರಿ ಬಂದ್ ತೀವ್ರವಾಗಿರಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ರೈತ ಮುಖಂಡರ ಸಭೆಯ ಬಳಿಕ ಮಾತನಾಡಿದ ಅವರು,  ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ, ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ, ಸೇರಿದಂತೆ ಎಲ್ಲ  ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೇರೆ ಸಂಘಟನೆಗಳೆಲ್ಲವೂ ಬೆಂಬಲ ಘೋಷಿಸುವುದನ್ನು ಬಿಟ್ಟು ನೈತಿಕ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರೈತರು ಈ ಹೋರಾಟದ ನೇತೃತ್ವವನ್ನು ವಹಿಸಲಿದ್ದಾರೆ. ಈ ಬಾರಿ ತೀವ್ರ ರೀತಿಯ ಬಂದ್ ನಡೆಯಲಿದೆ. ಭಾರತ್ ಬಂದ್ ಗೆ ವಿರೋಧ ವ್ಯಕ್ತಪಡಿಸುವವರು ಸರ್ಕಾರದ ಪರವಾಗಿರುವವರು ಮಾತ್ರ. ನಾವು ರಾಜಕೀಯ ಪಕ್ಷಗಳ ಬೆಂಬಲ ಕೇಳುತ್ತಿಲ್ಲ. ಇದು ಅನ್ನದಾತರ ಹೋರಾಟವಾಗಿದೆ ಎಂದು ಅವರು ತಿಳಿಸಿದರು.


Provided by

ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ರೈಲ್ವೆ, ಹೆದ್ದಾರಿ ಎಲ್ಲವನ್ನೂ ಕಂಪೆನಿಗಳಿಗೆ ನೀಡುತ್ತಿದೆ. ಹೀಗೆ ಮುಂದುವರಿದರೆ, ರೈತರನ್ನೂ ಖಾಸಗೀಕರಣ ಮಾಡುತ್ತಾರೆ. ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೂರು  ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಯಲಿದೆ ಬಂದ್ ಯಶಸ್ವಿಗೊಳಿಸುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

“ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಗೂ ಬಾಡಿಗೆಗೆ ಕೊಡಬಹುದು”

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ | ಆರೋಪಿ ಅರೆಸ್ಟ್

ನಿದ್ದೆಯಿಂದ ಎಚ್ಚರವಾದ ವೇಳೆ ಆತ ಅತ್ಯಾಚಾರ ನಡೆಸ್ತಿದ್ದ | ಅತ್ಯಾಚಾರಕ್ಕೂ ಮುನ್ನ ಸಂತ್ರಸ್ತೆಯ ವಿಶ್ವಾಸಗಳಿಸಿದ್ದ ಕ್ಯಾಬ್ ಡ್ರೈವರ್!

ಸೆ.26ರಂದು ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ | ಅವರ ಕಿರುಪರಿಚಯ ಇಲ್ಲಿದೆ

ಅ.2: ದ.ಕ. ಬಾಮ್ಸೆಫ್ ನಿಂದ ಪೂನಾ ಒಪ್ಪಂದ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯಾಗಾರ

ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ತಂದೆಯನ್ನು ಹತ್ಯೆ ಮಾಡಿದ ಮಗಳು!

ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!

ಇತ್ತೀಚಿನ ಸುದ್ದಿ