ಈ ಗ್ರಾಮದಲ್ಲಿ ಸಂಕ್ರಾಂತಿ ಆಚರಿಸಿದರೆ, ಜನ ಜಾನುವಾರು ಸಾಯುತ್ತವಂತೆ! - Mahanayaka

ಈ ಗ್ರಾಮದಲ್ಲಿ ಸಂಕ್ರಾಂತಿ ಆಚರಿಸಿದರೆ, ಜನ ಜಾನುವಾರು ಸಾಯುತ್ತವಂತೆ!

14/01/2021

ಕೋಲಾರ: ರಾಜ್ಯಾದ್ಯಂತ ಜನರು ಸಂಕ್ರಾಂತಿ ಆಚರಿಸುತ್ತಿದ್ದರೆ, ಇತ್ತ ಕೋಲಾರದಲ್ಲಿ  ಮಾತ್ರ ಜನರು ಮನೆಯಿಂದ ಹೊರಬಾರದೇ ಭಯಾತಂಕದಿಂದ ದಿನ ಕಳೆದಿದ್ದಾರೆ. ಈ ದಿನ ಹಬ್ಬ ಆಚರಿಸಿದರೆ, ಜನ ಜಾನುವಾರುಗಳು ಸಾಯುತ್ತಾರೆ ಎಂಬ ನಂಬಿಕೆ ಇವರದ್ದು.


Provided by

ಈ ಘಟನೆ ನಡೆದಿರುವುದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ.  ಹಿಂದಿನಿಂದಲೂ ಗ್ರಾಮದಲ್ಲಿ ಸಂಗ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿಲ್ಲ. ಸಂಕ್ರಾಂತಿ ಹಬ್ಬ ಆಚರಿಸಿದರೆ,  ಊರಿಗೆ ಕೆಟ್ಟದಾಗುತ್ತದೆ ಎಂಬ ನಂಬಿಕೆ ಇಲ್ಲಿದೆ. ಕೋಲಾರ ನಗರಕ್ಕೆ ಕೂಗಳತೆಯ ದೂರದಲ್ಲಿರುವ ನಗರವೊಂದರಲ್ಲಿ ಇಂತಹ ಆಚರಣೆ ಇದೆ.

ಈ ಹಿಂದೆ ಹಬ್ಬದ ದಿನ ದನಕರುಗಳನ್ನು ಓಡಿಸಲಾಗಿತ್ತು. ಹೀಗೆ ಓಡಿಸಿದ ಜನ ಮತ್ತು ಜಾನುವಾರುಗಳು ಮರಳಿ ಬಂದಿಲ್ಲವಂತೆ. ಆ ಬಳಿಕ ಗ್ರಾಮದಲ್ಲಿ ಕೂಡ ದನಕರುಗಳು ಸಾವನ್ನಪ್ಪುತ್ತಿದ್ದವಂತೆ. ಇದರಿಂದಾಗಿ ಈ ದಿನವನ್ನು ಗ್ರಾಮಸ್ಥರು ಶೋಕದಿಂದ ಆಚರಿಸುತ್ತಿದ್ದಾರಂತೆ. ಆದರೆ, ಸ್ಪಷ್ಟವಾಗಿ ಈ ಭಯ ಭೀತಿಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.


Provided by

ಸಂಕ್ರಾಂತಿ ದಿನ ದನಕ್ಕೆ ಪೂಜೆ ಮಾಡಿದರೆ, ದನಕರುಗಳು ಸಾಯುತ್ತವೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಹೀಗಾಗಿ, ನಾವು ಸಂಕ್ರಾಂತಿ ದಿನ ಪೂಜೆ ಮಾಡುವುದಿಲ್ಲ, ಬೇರೊಂದು ದಿನ ಪೂಜೆ ಮಾಡುತ್ತೇವೆ ಎಂದು ಗ್ರಾಮಸ್ಥರು ಪ್ರಾರ್ಥಿಸಿದ ಬಳಿಕ  ಈ ಗ್ರಾಮದಲ್ಲಿ ಹಸುಗಳ ಸಾವು ನಿಂತಿತ್ತಂತೆ. ಹೀಗಾಗಿ ಸಂಕ್ರಾಂತಿ ದಿನದಂದು ಈ ಗ್ರಾಮದಲ್ಲಿ ಯಾವುದೇ ಪೂಜೆಗಳು ಇರುವುದಿಲ್ಲ ಎಂದು ಜನರ ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ