ಪ್ರತಿಭಟನೆಯಲ್ಲಿ ಭಾಗಿಯಾದರೆ ಸರ್ಕಾರಿ ಉದ್ಯೋಗ, ಸೌಲಭ್ಯಗಳು ಸಿಗಲ್ಲ | ಈ ರಾಜ್ಯದಲ್ಲೊಂದು ವಿಚಿತ್ರ ಕಾನೂನು
ನವದೆಹಲಿ: ಹೊಸ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಸರ್ಕಾರಗಳು ಜನರನ್ನು ಕಟ್ಟಿ ಹಾಕಲು ಆರಂಭಿಸಿದೆ. ಭಾರತ ಪ್ರತಿಯೊಬ್ಬ ಪ್ರಜೆಗೂ ಪ್ರತಿಭಟಿಸುವ, ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನೀಡಿದ್ದರೆ, ಇಲ್ಲೊಂದು ಸರ್ಕಾರ ಪ್ರತಿಭಟಿಸಿದರೆ ಸರ್ಕಾರಿ ಉದ್ಯೋಗ, ಸೇರಿದಂತೆ ವಿವಿಧ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾನೂನು ಜಾರಿಗೆ ಮುಂದಾಗಿದೆ.
ಈ ಸಂಬಂಧ ಜಾರಿಗೊಳಿಸಲಾಗಿರುವ ಸುತ್ತೋಲೆಯಲ್ಲಿಪ್ರತಿಭಟನೆ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸರ್ಕಾರಿ ಉದ್ಯೋಗ, ಗುತ್ತಿಗೆ ಆಧಾರಿತ ಕೆಲಸ, ಒಪ್ಪಂದ, ಮಂಡಳಿ ಮತ್ತು ಆಯೋಗದ ಕೆಲಸ, ಪೆಟ್ರೋಲ್ ಬಂಕ್ ಪರವಾನಿಗೆ, ಗ್ಯಾಸ್ ಏಜೆನ್ಸಿ ಪರವಾನಿಗೆ, ಪಾಸ್ಪೋರ್ಟ್, ಸರ್ಕಾರಿ ಅನುದಾನ, ಬ್ಯಾಂಕ್ ಸಾಲ ಪಡೆಯಲು ಅವಕಾಶವಿರುವುದಿಲ್ಲಎಂದು ಸರ್ಕಾರ ಹೇಳಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರತಿಭಟನೆ, ರಸ್ತೆ ತಡೆ ಮೊದಲಾದ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಕೊಂಡಿದ್ದರೆ, ಪೊಲೀಸರು ಆರೋಪ ಹೊರಿಸಿದ್ದರೆ ಅಂಥವರಿಗೆ ಸರ್ಕಾರಿ ಉದ್ಯೋಗ ಹಾಗೂ ಇತರೆ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗಿದೆ.