ಈ ಸಮಸ್ಯೆಗಳಿರುವವರು ಲಸಿಕೆ ಸ್ವೀಕರಿಸಬೇಡಿ | ಸೇರಮ್ ಇನ್ ಸ್ಟಿಟ್ಯೂಟ್
19/01/2021
ನವದೆಹಲಿ: ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಭಾರತ ಸೇರಮ್ ಇನ್ ಸ್ಟಿಟ್ಯೂಟ್, ಅಲರ್ಜಿ ಸಮಸ್ಯೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್ ಲಸಿಕೆಗಳನ್ನು ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ.
ಕೋವಿಶೀಲ್ಡ್ ಲಸಿಕೆಗೆ ಎಲ್ – ಹಿಸ್ಟಿಡೈನ್, ಎಲ್ – ಹಿಸ್ಟಿಡೈನ್ ಹೈಡ್ರೋಕ್ಲೋರೈಡ್ ಮೊನೋಹೈಡ್ರೇಟ್, ಮ್ಯಾಗ್ನೀಷಿಯಂ ಕ್ಲೋರೈಡ್ ಹೆಕ್ಸಾಹೈಡ್ರೇಟ್, ಪೋಲಿಸೋರ್ಬೆಟ್, ಎಥನಾಲ್, ಸುಕ್ರೋಸ್, ಸೋಡಿಯಂ ಕ್ಲೋರೈಡ್, ಡೈಸೋಡಿಯಂ ಎಡಿಟೇಟ್ ಡಿಹೈಡ್ರೇಟ್ ಹಾಗೂ ಇಂಜೆಕ್ಷನ್ ವಾಟರ್ ಬಳಕೆ ಮಾಡಿದ್ದೇವೆ ಎಂದು ಸೇರಮ್ ಮಾಹಿತಿ ನೀಡಿದೆ.
ಗರ್ಭಿಣಿಯರು ಹಾಗೂ ಗರ್ಭಿಣಿಯಾಗುವ ತಯಾರಿಯಲ್ಲಿರುವವರು ಹಾಗೂ ಬಾಣಂತಿಯರು, ಜ್ವರ ಲಕ್ಷಣ ಇರುವವರು ಈ ಲಸಿಕೆಯನ್ನು ಪಡೆಯಬೇಡಿ. ಈಗಾಗಲೇ ಬೇರೆ ಲಸಿಕೆಯ ಡೋಸ್ ಪಡೆದಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡುವಂತೆ ಹೇಳಿದೆ.