ಇಯರ್ ಫೋನ್ ಬಳಕೆಯಿಂದ ನಮ್ಮ ಮೆದುಳಿಗೆ ಆಗುವ ಸಮಸ್ಯೆಗಳೇನು ಗೊತ್ತಾ? - Mahanayaka
3:58 AM Thursday 19 - September 2024

ಇಯರ್ ಫೋನ್ ಬಳಕೆಯಿಂದ ನಮ್ಮ ಮೆದುಳಿಗೆ ಆಗುವ ಸಮಸ್ಯೆಗಳೇನು ಗೊತ್ತಾ?

earphones
09/12/2021

ವಿಜ್ಞಾನ ಮುಂದುವರಿದಂತೆಯೇ ಅದರ ದುರ್ಬಳಕೆ ಕೂಡ ಹೆಚ್ಚಾಗುತ್ತಲೇ ಬಂದಿದೆ. ರೆಡಿಯೋ, ಟೆಲಿಫೋನ್, ಕಂಪ್ಯೂಟರ್ ಹೀಗೆ ಆಧುನಿಕ ಉಪಕರಣಗಳು ಮನುಷ್ಯನ ಅಭಿರುಚಿಗೆ ತಕ್ಕಂತೆಯೇ ಬೆಳೆಯುತ್ತಲೇ ಬಂದಿದೆ. ಈ ಪೈಕಿ ಇಯರ್ ಫೋನ್ ಗಳು ಮತ್ತು ಹೆಡ್ ಫೋನ್ ಗಳು ಕೂಡ ಒಂದಾಗಿವೆ.

ಪ್ರಸ್ತುತ ಯಾವುದೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿ, ಆಲ್ಬಾಮ್ ಸಾಂಗ್ ಬಿಡುಗಡೆಯಾಗಲಿ, ಅದರಲ್ಲಿ ಮೊದಲು, ಇಯರ್ ಫೋನ್ ಬಳಸಿ ಎಂದು ಸೂಚನೆ ನೀಡುತ್ತಾರೆ. ಇದಕ್ಕೆ ಕಾರಣ, ಇಯರ್ ಫೋನ್ ಬಳಕೆಯಿಂದ ವಿಡಿಯೋದಲ್ಲಿ ಬಳಸಿರುವ ಆಡಿಯೋ ಎಫೆಕ್ಟ್ ಗಳು ಸರಿಯಾಗಿ ಸಿಗುತ್ತವೆ.

ಇತ್ತೀಚೆಗಷ್ಟೇ ಸರ್ಕಾರಿ ಬಸ್ ಗಳಲ್ಲಿ ಜೋರಾಗಿ ಮೊಬೈಲ್ ನಲ್ಲಿ ಹಾಡು ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ಕೊಡಬಾರದು. ಹಾಡು ಕೇಳುವುದಿದ್ದರೆ, ಇಯರ್ ಫೋನ್ ಬಳಸಿಯೇ ಹಾಡು ಕೇಳಿ ಎಂದು ಕೆಎಸ್ಸಾರ್ಟಿಸಿ ನಿಯಮ ಹಾಕಿರುವುದನ್ನು ಗಮನಿಸಬಹುದು. ಇಯರ್ ಫೋನ್ ಬಳಕೆಯಿಂದ ಇತರರಿಗೆ ತೊಂದರೆಯಾಗುವುದಿಲ್ಲವಾದರೂ, ಅದನ್ನು ಬಳಸುವ ವ್ಯಕ್ತಿಗೆ ಸಾಕಷ್ಟು ತೊಂದರೆಗಳಿವೆ.


Provided by

ಸಾಮಾನ್ಯವಾಗಿ ಸ್ನೇಹಿತರು ತಮ್ಮ ಇಯರ್ ಫೋನ್ ಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ, ಇದು ಅಪಾಯಕಾರಿಯಾಗಿದೆ. ಒಬ್ಬರು ಬಳಸಿದ ಇಯರ್ ಫೋನ್ ನ್ನು ಇನ್ನೊಬ್ಬರು ಬಳಸಿದರೆ, ಬ್ಯಾಕ್ಟೀರಿಯಾಗಳು ಒಬ್ಬರಿಂದೊಬ್ಬರಿಗೆ ವರ್ಗಾಯಿಸಲ್ಪಡುತ್ತವೆ. ಹಾಗಾಗಿ ನಮ್ಮ ಇಯರ್ ಫೋನ್ ಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳದಿರುವುದು ಸೂಕ್ತ.

ಇಯರ್ ಫೋನ್ ಅಥವಾ ಹೆಡ್ ಫೋನ್ ಗಳು ಎಲೆಕ್ಟ್ರೋ ವ್ಯಾಗ್ನೆಟಿಕ್ ತರಂಗಗಳನ್ನು ಹೊರ ಸೂಸುತ್ತವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಇದರಿಂದ ನಮ್ಮ ಮೆದುಳಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಜೊತೆಗೆ ಇಯರ್  ಫೋನ್ ನ ಅತಿಯಾದ ಬಳಕೆಯಿಂದ ಕಿವಿನೋವು, ಕಿವುಡುತನ ಬರುವ ಸಾಧ್ಯತೆಗಳು ಹೆಚ್ಚಿವೆ.

ಮನುಷ್ಯನಿಗೆ ಕಣ್ಣು, ಮೂಗು, ಬಾಯಿ ಎಷ್ಟು ಮುಖ್ಯವೋ ಕಿವಿ ಕೂಡ ಅಷ್ಟೇ ಮುಖ್ಯವಾಗಿದೆ. ಒಂದು ದಿನ ನಮ್ಮ ಕಿವಿ ನಮಗೆ ಸರಿಯಾಗಿ ಕೇಳಿಸದಿದ್ದರೆ, ಅದರಿಂದ ಎಷ್ಟು ಕಿರಿಕಿರಿ ಉಂಟಾಗುತ್ತದೆ ಎನ್ನುವುದು ಅನುಭವಿಸಿದವರಿಗಷ್ಟೇ ತಿಳಿಯಲು ಸಾಧ್ಯ. ಹಾಗಾಗಿ ನಾವು ಯಾವುದೇ ವಸ್ತುಗಳನ್ನು ಬಳಸುವಾಗ ಹಿತ ಹಾಗೂ ಮಿತವಾಗಿ ಬಳಸಿದರೆ ಉತ್ತಮ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೇನಾ ಹೆಲಿಕಾಫ್ಟರ್ ಪತನದ ಹಿಂದೆ ಚೀನಾ ಕೈವಾಡ? | ಲೇಸರ್ ದಾಳಿ ನಡೆಯಿತೇ?

ಸೇನಾ ಹೆಲಿಕಾಫ್ಟರ್ ಪತನ ಹಿನ್ನೆಲೆ:  ಹುಟ್ಟುಹಬ್ಬ ಆಚರಣೆ ರದ್ದುಗೊಳಿಸಿದ ಸೋನಿಯಾ ಗಾಂಧಿ

ಮೀನುಗಾರ ಮಹಿಳೆಯನ್ನು ಅವಮಾನಿಸಿ ಬಸ್ ನಿಂದ ಬಲವಂತವಾಗಿ ಇಳಿಸಿದ ಕಂಡೆಕ್ಟರ್: ತಮಿಳುನಾಡು ಸಿಎಂ ಮಾಡಿದ್ದೇನು ಗೊತ್ತಾ?

ಸೇನಾ ವಿಮಾನ ಪತನ: 14 ಮಂದಿಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಇವರೊಬ್ಬರೇ…

ಸೇನಾ ಹೆಲಿಕಾಫ್ಟರ್ ಪತನ: ಬಿಪಿನ್ ರಾವತ್ ಪತ್ನಿ ಮಧುಲಿಕಾ ಮೃತ್ಯು?, ಬಿಪಿನ್ ರಾವತ್ ಸ್ಥಿತಿ ಗಂಭೀರ!

ಮೊಟ್ಟೆ ಯೋಜನೆ ಕೈ ಬಿಡದಿದ್ದರೆ, ಬೀದಿಗಿಳಿದು ಹೋರಾಟ: ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ

ಇತ್ತೀಚಿನ ಸುದ್ದಿ