10 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ
07/11/2020
ಇಸ್ರೋ: ಕೃಷಿ, ಅರನ್ಯ ವಿಪತ್ತು ನಿರ್ವಹಣೆಗೆ ನೆರವಾಗಲು ಪಿಎಸ್ ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಇಸ್ಟೋ ಇಂದು ಉಡಾವಣೆ ಮಾಡಿದೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಸಾಧನೆ ಮಾಡಿದ್ದು, ಪಿಎಸ್ ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ ಹಾಗೂ 9 ವಿದೇಶಿ ಉಪಗ್ರಹಗಳನ್ನು ಒಳಗೊಂಡ ಪಿಎಸ್‌ಎಲ್ ವಿ ಸಿ-49 ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.