ಡೊಳ್ಳು ಹೊಟ್ಟೆಯನ್ನು ವ್ಯಾಯಾಮವೇ ಮಾಡದೇ ಕರಗಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ
ಬಹುತೇಕ ಜನರಿಗೆ ತಮ್ಮ ತೂಕ ಇಳಿಸುವುದು ಒಂದು ಸಾಹಸಮಯವಾದ ಕೆಲಸವಾಗಿರುತ್ತದೆ. ಜಿಮ್ ಗೆ ಹೋದರೂ, ನಾನಾ ಯೋಗಾಸನಗಳನ್ನು ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ಬಹಳಷ್ಟು ಜನರು ಬೇಸರದಿಂದ ಮಾತನಾಡುವುದಿದೆ. ಆದರೆ ದೇಹದ ತೂಕ ಇಳಿಕೆಗೆ ನಮ್ಮ ಆಹಾರದಲ್ಲಿ ಬದಲಾವಣೆ ಕೂಡ ಇರಬೇಕು ಎನ್ನುವುದಕ್ಕೆ ಯಾರೂ ಹೆಚ್ಚಿನ ಒತ್ತು ನೀಡುವುದೇ ಇಲ್ಲ.
ಕೊಬ್ಬು ಮತ್ತು ಹೊಟ್ಟೆಯನ್ನು ನಿಯಂತ್ರಿಸಲಾಗದೇ, ಈಗಿನ ಯುವಕರೇ ಚಡಪಡಿಸುತ್ತಾರೆ. ಇದಕ್ಕಾಗಿ ಜಿಮ್ ಗೆ ಹೋಗಿ ನಾನಾ ಕಸರತ್ತು ಮಾಡಿದರೂ, ಸ್ವಲ್ಪ ದಿನದ ಬಳಿಕ ಅದೇ ಸ್ಥಿತಿಗೆ ಮತ್ತೆ ಮರಳುತ್ತಾರೆ. ಹಾಗಿದ್ದರೆ, ಈ ಬೊಜ್ಜು ಹಾಗೂ ಹೊಟ್ಟೆಯನ್ನು ಕಡಿಮೆ ಮಾಡಲು ಇರುವ ಬೇರೆ ದಾರಿ ಏನು? ಎಂದು ಹುಡುಕುವುದಾದರೆ, ನಮ್ಮ ತೋಟಗಳಲ್ಲಿಯೇ ಸಿಗುವ ಬಾಳೆ ದಿಂಡು(ದಂಟು) ನಮ್ಮ ತೂಕ ಇಳಿಸುತ್ತದೆ. ಜೊತೆಗೆ ಡೊಳ್ಳು ಹೊಟ್ಟೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಬಾಳೆ ಗಿಡದ ದಂಟನ್ನು ಸಣ್ಣದಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಬೇಕು. ಬಳಿಕ ಅದರ ರಸವನ್ನು ಸೋಸಿಕೊಂಡು ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಗ್ಲಾಸ್ ನಷ್ಟು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಧಾನವಾಗಿ ದೇಹದಲ್ಲಿದ್ದ ಬೊಜ್ಜು ಕರಗಿ, ಹೊಟ್ಟೆ ಇಳಿಯಲು ಆರಂಭವಾಗುತ್ತದೆ. ನಿಮ್ಮ ದೇಹಕ್ಕೆ ಆರೋಗ್ಯಕರವಾದ ತೂಕವೂ ದೊರಕುತ್ತದೆ.
ಇನ್ನಷ್ಟು ಸುದ್ದಿಗಳು…
ದಾಳಿಂಬೆ ಹಣ್ಣಿನ ರಸ ಸೇವಿಸಿ, ಈ ರೋಗಗಳಿಂದ ಮುಕ್ತಿ ಪಡೆಯಿರಿ!
3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ
ಶಾಕಿಂಗ್ ನ್ಯೂಸ್: ಅತೀ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕೊರೊನಾ ವೈರಸ್!
ಕರಾಟೆ ಬೆಲ್ಟ್ ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಬಾಲಕಿ!
SSLC Exam result 2021 | ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ, ಎಲ್ಲರೂ ಪಾಸ್




























