ಇಬ್ಬರ ಬಾಳಿಗೆ ಬೆಳಕಾದ ಸಂಚಾರಿ ವಿಜಯ್: ಮಹಿಳೆಗೆ ಕಿಡ್ನಿ ಕಸಿ ಯಶಸ್ವಿ
15/06/2021
ಬೆಂಗಳೂರು: ಬೈಕ್ ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಕಸಿ ಮಾಡಲಾಗಿದ್ದು, ಇಬ್ಬರು ಅಂಧರಿಗೆ ಕಣ್ಣು ದಾನ ಮಾಡಲಾಗಿದ್ದು, ಮಹಿಳೆಯೊಬ್ಬರಿಗೆ ಕಿಡ್ನಿ ಜೋಡಣೆ ಮಾಡಲಾಗಿದೆ.
ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ನಿನ್ನೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಈಗಾಗಲೇ ಮೂತ್ರಪಿಂಡಗಳನ್ನು ಮಹಿಳೆಯೊಬ್ಬರಿಗೆ ಅಳವಡಿಸಲಾಗಿದೆ. ನಗರದ ಲಗ್ಗೆರೆ ಮೂಲದ 34 ವರ್ಷ ವಯಸ್ಸಿನ ಮಹಿಳೆಗೆ ವಿಜಯ್ ಅವರ ರಕ್ತದ ಗುಂಪು, ಡಿಎನ್ ಎ, ಕಿಡ್ನಿ ಗಾತ್ರ ಎಲ್ಲವೂ ಹೊಂದಾಣಿಕೆಯಾಗಿತ್ತು. ಹೀಗಾಗಿ ಕಿಡ್ನಿಯನ್ನು ಯಶಸ್ವಿಯಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟೇಷನ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನೂ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್ ಅವರ ಕಣ್ಣುಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಒಬ್ಬರಿಗೆ ಈಗಾಗಲೇ ಕಣ್ಣುಗಳನ್ನು ಜೋಡಿಸಲಾಗಿದೆ. ದೃಷ್ಟಿ ಕಳೆದುಕೊಂಡಿರುವ ಇಬ್ಬರ ಬಾಳಲ್ಲಿ ವಿಜಯ್ ಬೆಳಕು ನೀಡಿದ್ದಾರೆ.