ಇಬ್ಬರ ವಿಕಸನಕ್ಕಾಗಿ ಸಾರ್ವಜನಿಕರ ಲೂಟಿ | ಕೇಂದ್ರದ ವಿರುದ್ಧ ರಾಹುಲ್ ಟ್ವೀಟ್ ದಾಳಿ - Mahanayaka

ಇಬ್ಬರ ವಿಕಸನಕ್ಕಾಗಿ ಸಾರ್ವಜನಿಕರ ಲೂಟಿ | ಕೇಂದ್ರದ ವಿರುದ್ಧ ರಾಹುಲ್ ಟ್ವೀಟ್ ದಾಳಿ

15/02/2021

ನವದೆಹಲಿ: ಕೇವಲ ಇಬ್ಬರು ವ್ಯಕ್ತಿಗಳ ವಿಕಸನಕ್ಕಾಗಿ ಸರ್ಕಾರ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಎಲ್ ಪಿಜಿ ಸಿಲಿಂಡರ್ ಬೆಲೆ  50ರೂ. ಏರಿಕೆಯಾಗಿದ್ದನ್ನು ಉಲ್ಲೇಖಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಜನತಾ ಸೇ ಲೂಟ್, ಸಿರ್ಫ್ ದೋ ಕಾ ವಿಕಾಸ್ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್  ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ವಾಕ್ಯವನ್ನು ವ್ಯಂಗ್ಯವಾಡಿದ್ದಾರೆ.


Provided by

ತಮ್ಮ ಟ್ವೀಟ್ ನಲ್ಲಿ ಆ ಇಬ್ಬರು ವ್ಯಕ್ತಿಗಳು ಯಾರು ಎನ್ನುವುದನ್ನು ರಾಹುಲ್ ಗಾಂಧಿ ಉಲ್ಲೇಖಿಸಿಲ್ಲವಾದರೂ, ಉದ್ಯಮಿಗಳಾದ ಅನಿಲ್ ಅಂಗಾನಿ ಹಾಗೂ ಗೌತಮ್ ಅಂಬಾನಿಯವರನ್ನು ಅವರು ಉಲ್ಲೇಖಿಸಿ ಈ ಟ್ವೀಟ್ ಮಾಡಿದ್ದಾರೆ ಎಂದು ಊಹಿಸಲಾಗಿದೆ.

ಇತ್ತೀಚಿನ ಸುದ್ದಿ