ಮತ್ತೆ ಪ್ರಪಂಚವನ್ನು ನೋಡಲಿದೆ ಪುನೀತ್ ಕಣ್ಣುಗಳು! | ಇಬ್ಬರಿಗೆ ದೃಷ್ಟಿ ನೀಡಲಿರುವ ಅಪ್ಪು
ಬೆಂಗಳೂರು: ತಂದೆ ರಾಜ್ ಕುಮಾರ್ ಅವರ ಹಾದಿಯಲ್ಲಿಯೇ ಸಾಗಿದ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಕಣ್ಣುಗಳು ಮರು ಜೀವ ಪಡೆದುಕೊಂಡಿದ್ದು, ಎರಡು ಜೀವಗಳು ಇನ್ನು ಮುಂದೆ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳಿಂದ ಈ ಪ್ರಪಂಚವನ್ನು ನೋಡಲಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ಪುನೀತ್ ಕಣ್ಣುಗಳನ್ನು ಇಬ್ಬರಿಗೆ ಜೋಡಣೆ ಮಾಡಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದ್ದು, ಇಂದು ಮತ್ತೊಬ್ಬರಿಗೆ ಆಪರೇಷನ್ ನಡೆಸಿ ಕಣ್ಣನ್ನು ಯಶಸ್ವಿಯಾಗಿ ಜೋಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಪುನೀತ್ ಅವರ ಕಣ್ಣು ಜೋಡಣೆ ವಿಚಾರವಾಗಿ ವೈದ್ಯರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka