ಇಬ್ಬರು ಬಾಲಕರ ಮೆದುಳಿಗೆ ಹಾನಿ ಮಾಡಿದ ಬ್ಲ್ಯಾಕ್ ಫಂಗಸ್
30/05/2021
ಬೆಂಗಳೂರು: ಇಬ್ಬರು ಬಾಲಕರಿಗೆ ಬ್ಲ್ಯಾಕ್ ಫಂಗಸ್ ಬಂದಿದ್ದು, ಓರ್ವ ಬಾಲಕ ಬ್ಲ್ಯಾಕ್ ಫಂಗಸ್ ನಿಂದ ಕಣ್ಣುಗಳನ್ನು ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
14 ವರ್ಷ ಮತ್ತು 11 ವರ್ಷದ ಬಾಲಕರಿಗೆ ಬ್ಲಾಕ್ ಫಂಗಸ್ ತಗುಲಿದ್ದು, ಇಬ್ಬರಿಗೂ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್ ಮಾಡಿದೆ. ಚಿತ್ರ ದುರ್ಗ ಮೂಲದ ಓರ್ವ 11 ವರ್ಷ ವಯಸ್ಸಿನ ಬಾಲಕ ಕಣ್ಣು ಕಳೆದುಕೊಂಡಿದ್ದಾನೆ.
ಬಳ್ಳಾರಿ ಮೂಲದ 14 ವರ್ಷದ ಬಾಲಕನಿಗೂ ಬ್ಲಾಕ್ ಫಂಗಸ್ ದೃಢವಾಗಿದೆ. ಮಿಂಟೋ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.