ತನ್ನ ಇಬ್ಬರು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳಿಂದಲೇ ಹತ್ಯೆಗೀಡಾದ ತಾಯಿ! - Mahanayaka
3:27 AM Wednesday 11 - December 2024

ತನ್ನ ಇಬ್ಬರು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳಿಂದಲೇ ಹತ್ಯೆಗೀಡಾದ ತಾಯಿ!

tamilnadu
22/07/2021

ತಮಿಳುನಾಡು: ತನ್ನದೇ ಇಬ್ಬರು ಮಾನಸಿಕ ಅಸ್ವಸ್ಥ ಮಕ್ಕಳಿಗೆ ತಾಯಿ ಬಲಿಯಾದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದ್ದು,  20 ವರ್ಷ ವಯಸ್ಸಿನ ಇಬ್ಬರು ಅಕ್ಕ-ತಂಗಿಯರು ತಮ್ಮ ತಾಯಿಯನ್ನೇ ಹೊಡೆದು ಕೊಂದಿದ್ದಾರೆ.

ಪತಿಯಿಂದ ದೂರವಾಗಿದ್ದ ಉಷಾ ಎಂಬವರು ತಮ್ಮ ಇಬ್ಬರು ಮಾನಸಿಕ ಅಸ್ವಸ್ಥ ಮಕ್ಕಳ ಜೊತೆಗೆ ವಾಸಿಸುತ್ತಿದ್ದರು. ಮಕ್ಕಳಿಗೆ ಟ್ಯೂಷನ್ ಹೇಳಿ ಜೀವನ ಸಾಗಿಸುತ್ತಿದ್ದ ಅವರು ಮಂಗಳವಾರದಂದು ತಮ್ಮ ಮನೆಯಿಂದ ಹೊರಗೆ ಬಂದಿರಲಿಲ್ಲ.  ಇದರಿಂದ ನೆರೆ ಹೊರೆಯವರು ಅನುಮಾನಗೊಂಡಿದ್ದು,  ಕಿಟಕಿಯಿಂದ ಇಣುಕಿ ನೋಡಿದಾಗ ಇಬ್ಬರು ಮಕ್ಕಳು ತಾಯಿಯ ಮೃತದೇಹದ ಬಳಿಯಲ್ಲಿ ಕುಳಿತಿರುವುದು ಕಂಡು ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಮನೆಯೊಳಗೆ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ,  ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ಓರ್ವ ಸಹೋದರಿ ಇನ್ನೋರ್ವಳು ಸಹೋದರಿಗೆ ಬಿಸ್ಕಿಟ್ ತಿನ್ನಿಸುತ್ತಾ ಕುಳಿತಿದ್ದಳು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸಹೋದರಿಯರ ಮನವೊಲಿಸಿ ಹೇಗೋ ಮನೆಯ ಬಾಗಿಲು ತೆರೆಸಿದ್ದಾರೆ.

ಇನ್ನೂ ಏನು ನಡೆಯಿತು ಎಂದು ಪೊಲೀಸರು ಎಷ್ಟು ಕೇಳಿದರೂ, ಮಕ್ಕಳು ಹೇಳಲು ತಯಾರಿರಲಿಲ್ಲ ಕೊನೆಗೆ ಬರ್ಗರ್ ಕೊಡಿಸುವುದಾಗಿ ಪೊಲೀಸರು ಹೇಳಿದ ಬಳಿಕ, ತಾಯಿಯನ್ನು ಹೊಡೆದು ಕೊಂದಿರುವುದಾಗಿ ಹೇಳಿದ್ದಾರೆ.

ಇನ್ನೂ ಇಬ್ಬರು ಸಹೋದರಿಯರಿಗೂ ಸೂಕ್ತ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ ಬಳಿಕ ಪೊಲೀಸರು ಹೇಳಿಕೆ ದಾಖಲು ಮಾಡುವ ಸಾಧ್ಯವಿದೆ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ರಾಜ್ ಕುಂದ್ರಾಗೆ ದಿನವೊಂದಕ್ಕೆ ಬರುತ್ತಿದ್ದ ಆದಾಯ ಎಷ್ಟು ಲಕ್ಷ ಗೊತ್ತಾ?

ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್

ರಾಜ್ ಕುಂದ್ರಾ ತಯಾರಿಸುತ್ತಿದ್ದ ನೀಲಿ ಚಿತ್ರ ಯಾವ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿತ್ತು? | ಪೊಲೀಸರು ನೀಡಿದ ಆ ಮಾಹಿತಿ ಏನು?

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

“ನಾನು ಕೂಡ ಬ್ರಾಹ್ಮಣ” | ಆಟದ ಮೈದಾನಕ್ಕೆ ಜಾತಿಯನ್ನು ಎಳೆದು ತಂದ ಸುರೇಶ್ ರೈನಾ

“ಒಂದು ರೀತಿಯಲ್ಲಿ ಕನ್ನಡಿಗರು ನಪುಂಸಕರು” ಎಂದು ಭಗವಾನ್ ಹೇಳಿದ್ದೇಕೆ?

ಇತ್ತೀಚಿನ ಸುದ್ದಿ