ಇಬ್ಬರು ಮಾವುತರಿಂದ ಆನೆಯ ಮೇಲೆ ಅಮಾನವೀಯ ಕೃತ್ಯ - Mahanayaka
4:14 PM Wednesday 11 - December 2024

ಇಬ್ಬರು ಮಾವುತರಿಂದ ಆನೆಯ ಮೇಲೆ ಅಮಾನವೀಯ ಕೃತ್ಯ

23/02/2021

ಚೆನ್ನೈ:  ಆನೆ ಶಿಬಿರವೊಂದರಲ್ಲಿ ಆನೆಯನ್ನು ಕಟ್ಟಿ ಹಾಕಿ ಇಬ್ಬರು ಮಾವುತರು ಅಮಾನವೀಯವಾಗಿ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಭಂ ಜೈನ್ ಎಂಬವರು  ಈ ಘಟನೆಯ ವಿಡಿಯೋವನ್ನು ಟ್ವೀಟ್  ಮಾಡಿದ್ದು, ಈ ಘಟನೆ ತಮಿಳುನಾಡಿನ ತೆಕ್ಕಂಪಟ್ಟಿಯ ಆನೆ ಶಿಬಿರದಲ್ಲಿ ನಡೆದಿದೆ ಎಂದು ಅವರು ಹೇಳಿದ್ದಾರೆ.

ಇಬ್ಬರು ಮಾವುತರು ದೊಣ್ಣೆ ಅಥವಾ ರಾಡ್ ನಿಂದ ಆನೆಯನ್ನು ಮನಬಂದಂತೆ ಥಳಿಸಿದ್ದಾರೆ. ಆನೆ ನೋವಿನಿಂದ ಬೊಬ್ಬಿಟ್ಟರೂ ಅಮಾನವೀಯವಾಗಿ ಥಳಿಸಿದ್ದಾರೆ.

ಈ ಘಟನೆ ಅಮಾನವೀಯವಾಗಿದ್ದು, ತಕ್ಷಣವೇ ಈ ಕೃತ್ಯ ಎಸಗಿದವರನ್ನು ಬಂಧಿಸುವಂತೆ ಶುಭಂ ಜೈನ್ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ