ಬೆಳ್ತಂಗಡಿ: ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಳ್ತಂಗಡಿ: ತಾಲೂಕಿನ ಹಿರಿಯ ನೃತ್ಯ ಗುರು ಕಮಲಾಕ್ಷ ಅಚಾರ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಳೆದ ಅರ್ಥ ಶತಮಾನದಿಂದ ನೃತ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಪಿ.ಕಮಲಾಕ್ಷ ಆಚಾರ್ ಅವರು ಸಹಸ್ರಾರು ಮಂದಿ ಶಿಷ್ಯರನ್ನು ಹೊಂದಿದ್ದಾರೆ.
ಕಮಲಾಕ್ಷ ಆಚಾರ್
1947ರಲ್ಲಿ ಬೆಳ್ತಂಗಡಿ ಯಲ್ಲಿ ಜನಿಸಿದ ಕಮಲಾಕ್ಷ ಆಚಾರ್ ಅವರು ಮಂಗಳೂರಿನಲ್ಲಿ ನೃತ್ಯ ಶಿಕ್ಷಣ ಪಡೆದು ಬೆಳ್ತಂಗಡಿಯಲ್ಲಿ 1976ರಲ್ಲಿ ಬೆಳ್ತಂಗಡಿ ಯಲ್ಲಿ ನೃತ್ಯ ನಿಕೇತನ ಎಂಬ ನೃತ್ಯ ಸಂಸ್ಥೆಯನ್ನು ಆರಂಭಿಸಿದರು. ಇವರಿಂದ ನೃತ್ಯಾಭ್ಯಾಸ ಪಡೆದಿರುವವರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳು ಇವರಿಗೆ ಸಂದಿದೆ. ಭಾರತೀಯ ನೃತ್ಯಕಲಾ ಒರಿಷತ್ತು ಮೈಸೂರು ಇವರಿಂದ ನೃತ್ಯ ವಿಧ್ಯಾನಿಧಿ ಬಿರುದು ಇವರಿಗೆ ಲಭಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯೋಪಾಧ್ಯಾಯ ರಾಗಿ ಸೇವೆ ಸಲ್ಲಿಸಿ 2005ರಲ್ಲಿ ಸೇವೆಯಿಂದ ನಿವೃತ್ತರಾದರು.
ಎಲ್.ಎಚ್.ಮಂಜುನಾಥ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾ.ಎಲ್.ಎಚ್ ಮಂಜುನಾಥ್ ಅವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಲಭಿಸಿದೆ.
ಇವರು ಮೂಲತ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಪಶು ವೈಧ್ಯರಾದ ಎಲ್.ಎಚ್ ಮಂಜುನಾಥ್ ಅವರು ಮಣಿಪಾಲದ ಟಿ.ಎಂ ಎ ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಪಡೆದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನು ಸೇರಿಕೊಂಡರು. ಗ್ರಾಮಾಭಿವೃದ್ದಿ ಯೋಜನೆಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka