ಇಬ್ಬರು ಯುವತಿಯರನ್ನು ಪ್ರೀತಿಸಿದ | ಓರ್ವಳಿಗೆ ಕರೆ ಮಾಡಿ ಬರ ಹೇಳಿದ ಆತ ಎಂತಹ ಕೆಲಸ ಮಾಡಿದ್ದಾನೆ ಗೊತ್ತಾ?
ಚಾಮರಾಜನಗರ: ಇಬ್ಬರು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ಯುವಕನೋರ್ವ, ಓರ್ವಳನ್ನು ನಂಬಿಸಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಆಂಜನೇಯಪುರ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಸಿದ್ದಪ್ಪ ಎಂಬಾತ ಕೃತ್ಯ ನಡೆಸಿದವನಾಗಿದ್ದು, ಬೆಂಗಳೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ 21 ವರ್ಷದ ನಂಜಮ್ಮಣಿ ಈತನ ಪ್ರೀತಿಯ ನಾಟಕ ನಂಬಿ ತನ್ನ ಪ್ರಾಣವನ್ನೇ ಕಳೆದುಕೊಂಡ ಯುವತಿಯಾಗಿದ್ದಾಳೆ.
ಸಿದ್ದಪ್ಪ ಯಾನೆ ಉಪೇಂದ್ರ ಎಂಬ ಆರೋಪಿಯು ನಂಜಮಣಿಯ ಜೊತೆಗೆ ಆಂಜನೇಯಪುರದಲ್ಲಿ ತನ್ನ ಮತ್ತೊಬ್ಬಳು ಪ್ರೇಯಸಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ನಂಜಮಣಿ, ಸಿದ್ದಪ್ಪಸ್ವಾಮಿ ತನ್ನನ್ನು ಪ್ರೀತಿಸುತ್ತಿದ್ದ ಎಂದು ತನ್ನ ಮನೆಯಲ್ಲಿ ಪಾಲಕರಿಗೆ ಫೋಟೋ ತೋರಿಸಿದ್ದಾಳೆ. ಈ ವೇಳೆ ಸಿದ್ದಪ್ಪಸ್ವಾಮಿಯ ಬಳಿ ಪಾಲಕರು ಪ್ರಶ್ನಿಸಿದಾಗ, ನಾನು ಇಬ್ಬರಿಗೂ ಮೋಸ ಮಾಡುವುದಿಲ್ಲ, ಇಬ್ಬರನ್ನೂ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ.
ಈ ಹೇಳಿಕೆಯ ಬಳಿಕ ಬೇರೆಯೇ ಪ್ಲಾನ್ ಮಾಡಿದ ಆರೋಪಿ, ನಂಜಮ್ಮಣಿಗೆ ಕರೆ ಮಾಡಿ ನಿಮ್ಮ ಮನೆಯವರು ತೊಂದರೆ ಕೊಡುತ್ತಿದ್ದಾರೆ, ನಾವಿಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಕರೆದಿದ್ದಾನೆ. ಎರಡೆರಡು ಪ್ರೀತಿ ಮಾಡಿ ಮೋಸ ಮಾಡಿದವನ ಮಾತನ್ನು ಕೂಡ ಆಕೆ ನಂಬಿದಳು ಆತ ಹೇಳಿದಂತೆ ಜೊತೆಯಾಗಿ ನಿಂತು ನೇಣಿಗೆ ಕೊರಳೊಡ್ಡಿದ್ದಾಳೆ. ನಂಜಮ್ಮಣಿ ಎದುರು ನೇಣು ಬಿಗಿದುಕೊಳ್ಳುವಂತೆ ನಾಟಕವಾಡಿದ ಸಿದ್ದಪ್ಪ ಆಕೆ ನಿಜವಾಗಿಯೂ ನೇಣಿಗೆ ಕೊರಳೊಡ್ಡಿ ಸಾಯುವವರೆಗೆ ನೋಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ