ಇಡಿ ಮುಂದೆ ಹಾಜರಾಗಲು ರಾಹುಲ್ ಗಾಂಧಿ ನಾಟಕ ಆಡುತ್ತಿದ್ದಾರೆ: ಅಮಿತ್ ಶಾ
ನವದೆಹಲಿ: ಇಡಿ ಮುಂದೆ ಹಾಜರಾಗಲು ರಾಹುಲ್ ಗಾಂಧಿ ನಾಟಕವಾಡುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ.
ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದ ನಂತರ ಅಮಿತ್ ಶಾ ರಾಹುಲ್ ಗಾಂಧಿಯನ್ನು ಟೀಕಿಸಿದ ಅವರು, ಮೋದಿ ಯಾವತ್ತೂ ನಾಟಕ ಮಾಡಿಲ್ಲ. ನಾನು ಸತ್ಯಕ್ಕಾಗಿ ಕಾಯುತ್ತಿದ್ದೆ ಎಂದರು
ಎಸ್ ಐಟಿ ಮುಂದೆ ಮೋದಿ ಹಾಜರಾದಾಗ ಯಾವುದೇ ನಾಟಕ ಆಡಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಪ್ರಶ್ನಿಸಬೇಕಾದರೆ ಅವರೇ ಸಹಕರಿಸುತ್ತಿದ್ದರು. ಈಗ ಇಡಿಯ ಮುಂದೆ ರಾಹುಲ್ ನಾಟಕ ಮಾಡುತ್ತಿರುವುದೇಕೆ? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಸೇರಿದಂತೆ 63 ಮಂದಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ನಿನ್ನೆ ಎತ್ತಿ ಹಿಡಿದಿತ್ತು. ನಾನಾವತಿ ಮೆಹ್ತಾ ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಝಾಕಿಯಾ ಜಾಫ್ರಿ ಅವರ ಆರೋಪಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವರ: ಅತಿಥಿ ಸಾವು
ಭಾರೀ ಪ್ರವಾಹಕ್ಕೆ ಸಿಲುಕಿ 40 ಮಂದಿ ಸಾವು: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
ಇಂಗ್ಲಿಷ್ ಮಾತನಾಡದಿದ್ದಕ್ಕೆ 4 ವರ್ಷದ ಬಾಲಕನಿಗೆ ಥಳಿತ: ಶಿಕ್ಷಕ ಅರೆಸ್ಟ್
ಬಾಳು ಕೊಡುತ್ತೇನೆಂದು ಮಹಿಳೆಯನ್ನು ಕರೆದೊಯ್ದ ಅರ್ಚಕ, ಕಾಡಿನಲ್ಲಿ ಬಿಟ್ಟು ಹೋದ!