ಬಿಲ್ಲವ, ಈಡಿಗ ಸಮುದಾಯದ ಪಾದಯಾತ್ರೆಗೆ ಬೆದರಿಕೆ ಹಾಕ್ತಿದ್ದಾರೆ: ಪ್ರಣವನಾಂದ ಸ್ವಾಮೀಜಿ ಆರೋಪ
ಬಿಲ್ಲವ, ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ನಡೆಸಲ್ಪಡುವ ಪಾದಯಾತ್ರೆ ಮಾಡಬಾರದೆಂದು ತಡೆ ಹಾಕಲು ಪ್ರಯತ್ನಿಸಲಾಗ್ತಿದೆ. ಸಮುದಾಯದ ಕೆಲ ನಾಯಕರಿಗೆ ಕರೆ ಮಾಡಿ ಮುಂದಿನ ದಿನಗಳಲ್ಲಿ ಅನುಭವಿಸಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪ್ರಣವನಾಂದ ಸ್ವಾಮೀಜಿ ಆರೋಪಿಸಿದರು.
ಅವರು ಇಂದು ಮಂಗಳೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನಗೆ ಸರ್ಕಾರದ ಭಾಗದಿಂದ ಬೆದರಿಕೆ ಇದೆ. ಅದರ ಬಗ್ಗೆ ಪ್ರತ್ಯಕ್ಷವಾಗಿ ಹೇಳಲ್ಲ. ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಆನೆ ಹೋಗುವಾಗ ನಾಯಿ ಬೊಗಳುತ್ತದೆ. ಅದ್ರಲ್ಲಿ ಸಾಕಷ್ಟು ನಾಯಿಗಳು ಇರ್ತದೆ. ಅದಕ್ಕೆ ಇದೇ ಉತ್ತರ ಎಂದರು.
ನಾನು ಸಮುದಾಯದ ಸ್ವಾಮೀಜಿ ಎಂದು ಹೇಳಿಕೊಳ್ಳಲ್ಲ. ಕೇರಳದ ಶಿವಗಿರಿ ಮಠದಲ್ಲಿ ನಾನು ಕರ್ನಾಟಕದಲ್ಲಿರೋ ನನ್ನ ಸಮುದಾಯದ ಪರವಾಗಿ ನ್ಯಾಯ ಕೊಡ್ತೇನೆ ಎಂದು ಶಪಥ ಮಾಡಿದ್ದೆ. ಏನೇ ಆಗಲಿ ನಮ್ಮ ಸಮುದಾಯವನ್ನು ಸಮಾಜದ ಕಟ್ಟಕಡೆಯ ಜನರಿಂದ ದೂರ ಮಾಡಲು ಸಾಧ್ಯವಿಲ್ಲ ಎಂದರು.
ಇನ್ನು 40 ದಿನಗಳಲ್ಲಿ ಬೆಂಗಳೂರಿಗೆ 658 ಕಿ.ಮೀ ಪಾದಯಾತ್ರೆ ಸಾಗಲಿದೆ. ಬಿಲ್ಲವರ ನಿಗಮ ಘೋಷಣೆಯಾಗಬೇಕು. ಗರೋಡಿಗಳ ಭೂಮಿ ಗರೋಡಿ ಸಮಿತಿಯವರಿಗೆ ಸಿಗಬೇಕು ಸೇರಿದಂತೆ ಮೊದಲಾದ 10 ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ರಾಜಕೀಯ ಪಕ್ಷ ಅಥವಾ ನಾಯಕರಿಂದ ದೇಣಿಗೆ ಪಡೆದಿಲ್ಲ. ಪಾದಯಾತ್ರೆಗೆ ಒಂದೂವರೆ ಕೋಟಿ ರೂ. ಖರ್ಚಾಗಲಿದ್ದು ಜಿಲ್ಲಾ ಸಮಿತಿಗಳು ಸಮುದಾಯದವರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw