“ಇದು ಮಗುವಲ್ಲ ಕುರಿ” ಎಂದು ಹೇಳಿ ಮಗುವನ್ನು ಕೊಚ್ಚಿ ಕೊಂದ ತಾಯಿ!
ಭೋಪಾಲ್: ಹೆತ್ತ ತಾಯಿಯೇ ತನ್ನ ಮಗುವನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಭೋಪಾಲ್ ನ ಅಶೋಕ ನಗರದಲ್ಲಿ ನಡೆದಿದ್ದು, 8 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿದೆ.
8 ತಿಂಗಳ ಕಾಲ ಮಗುವನ್ನು ಚೆನ್ನಾಗಿ ನೋಡಿಕೊಂಡಿದ್ದ ತಾಯಿ ಇದ್ದಕ್ಕಿದಂತೆ ವಿಚಿತ್ರವಾಗಿ ಆಡಿದ್ದು, ಮನೆಯ ಬಳಿ ಇರುವ ಹೆದ್ದಾರಿಯಲ್ಲಿ ಮಲಗಿಸಿ, ಕೊಚ್ಚಿಕೊಂದಿದ್ದು, ಬಳಿಕ ಮೃತದೇಹವನ್ನು ಮನೆಗೆ ಎತ್ತಿಕೊಂಡು ಬಂದಿದ್ದಾಳೆ. ಈ ವೇಳೆ ಮನೆಯವರು ಮಗುವನ್ನು ಯಾಕೆ ಕೊಂದಿ? ಎಂದು ಪ್ರಶ್ನಿಸಿದಾಗ, “ಅದು ಮಗುವಲ್ಲ, ಕುರಿ” ಎಂದು ತಾಯಿ ವಿಚಿತ್ರವಾದ ಉತ್ತರವನ್ನು ನೀಡಿದ್ದಾಳೆ.
ಪತ್ನಿಯ ಕೃತ್ಯದ ವಿರುದ್ಧ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಈ ಬಗ್ಗೆ ಪ್ರಶ್ನಿಸಿದಾಗ, “ಮಗು ಮೆಟ್ಟಿಲಿನಿಂದ ಬಿದ್ದು ಸತ್ತು ಹೋಗಿದೆ” ಎಂದು ಹೇಳಿದ್ದಾಳೆ. ಮಹಿಳೆಯು ಮಾನಸಿಕ ಅಸ್ವಸ್ಥೆ ಹಾಗಾಗಿ ಮಗುವನ್ನು ಕೊಚ್ಚಿ ಕೊಂದಿದ್ದಾಳೆ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ.
ಘಟನೆ ಸಂಬಂಧ ಆರೋಪಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಮಹಿಳೆಯ ಪೋಷಕರು ಮಗುವಿನ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.