ಇದು ನನ್ನ ಕೊನೆಯ ಸ್ಟೇಟಸ್ ಆಗಿರಬಹುದು | ಕೊರೊನಾ ಸೋಂಕಿತ ವೈದ್ಯೆ ಸಾಯುವ ಮೊದಲು ಹೇಳಿದ್ದೇನು? - Mahanayaka

ಇದು ನನ್ನ ಕೊನೆಯ ಸ್ಟೇಟಸ್ ಆಗಿರಬಹುದು | ಕೊರೊನಾ ಸೋಂಕಿತ ವೈದ್ಯೆ ಸಾಯುವ ಮೊದಲು ಹೇಳಿದ್ದೇನು?

manisha jadav
21/04/2021

ಮುಂಬೈ: ದೇಶಾದ್ಯಂತ ಕೊರೊನಾ ವೈರಸ್  ಎರಡನೇ ಅಲೆ ಜನರ ಪ್ರಾಣ ಹಿಂಡುತ್ತಿದ್ದು, ಮಹಾರಾಷ್ಟ್ರದಲ್ಲಿ ವೈದ್ಯೆಯೊಬ್ಬರು ತಮ್ಮ ಕೊನೆಯ ಸ್ಟೇಟಸ್ ಹಾಕಿದ ಬಳಿಕ ಕೊರೊನಾ ಸೋಂಕಿಗೆ ಬಲಿಯಾಗಿದ್ದು,  ವೈದ್ಯೆಯ ಕೊನೆಯ ಮಾತುಗಳು ಇದೀಗ ವ್ಯಾಪಕ ವೈರಲ್ ಆಗಿದೆ.

51 ವರ್ಷ ವಯಸ್ಸಿನ ಡಾ.ಮನಿಷಾ ಜಾಧವ್ ಕೊರೊನಾಕ್ಕೆ ಬಲಿಯಾದ ವೈದ್ಯೆಯಾಗಿದ್ದಾರೆ. ಅವರು ನಗರದ ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.  ಸಾವನ್ನಪ್ಪುವ ಕೆಲ ಗಂಟೆಗಳಿಗೂ ಮೊದಲು ಟ್ವೀಟ್ ಮಾಡಿರುವ ಹಾಗೂ ಫೇಸ್ ಬುಕ್ ಸ್ಟೇಟಸ್ ಹಾಕಿಕೊಂಡಿರುವ  ಡಾ.ಮನಿಷಾ,  ಬಹುಶಃ ಇದು ನನ್ನ ಲಾಸ್ಟ್ ಗುಡ್ ಮಾರ್ನಿಂಗ್ ಆಗಿರ ಬಹುದು.  ನಾವಿನ್ನು ಈ ಫ್ಲಾಟ್ ಫಾರಂನಲ್ಲಿ ಮೀಟ್ ಮಾಡಲು ಸಾಧ್ಯವಾಗದೇ ಇರಬಹುದು. ಎಲ್ಲರೂ  ನಿಮ್ಮನ್ನು ಕೇರ್ ಮಾಡಿಕೊಳ್ಳಿ, ದೇಹ ಸಾಯುತ್ತದೆ, ಆದರೆ ಆತ್ಮ ಸಾಯುವುದಿಲ್ಲ. ಆತ್ಮ ಎಂದಿಗೂ ಅಮರವಾಗಿರುತ್ತದೆ ಎಂದು ಅವರು ಸಾಂತ್ವಾನದ ನುಡಿಗಳನ್ನಾಡಿದ್ದಾರೆ.

ಮುಂಬೈಯನ್ನು ಮುಕ್ಕುತ್ತಿರುವ ಕೊರೊನಾ ವೈರಸ್ ಸಾವಿನ ಲೆಕ್ಕವೇ ಇಲ್ಲದಂತೆ ಮಾಡಿದೆ. ಇನ್ನೊಂದಡೆ ಬೆಂಗಳೂರಿನಲ್ಲಿ ಇಂತಹದ್ದೇ ಸ್ಥಿತಿ ನಿರ್ಮಾಣವಾಗುತ್ತದೆಯೇ ಎನ್ನುವ ಭೀತಿಯಲ್ಲಿ ಜನರಿದ್ದಾರೆ. ಸಾವಿಗೆ ಲೆಕ್ಕ ಕೇಳುವಂತಿಲ್ಲ, ನೋವಿನ ವಿದಾಯ ಹೇಳಲು ಸಂಬಂಧಿಕರು ಯಾರೂ ಇಲ್ಲದಂತಹ ಸ್ಥಿತಿಯಲ್ಲಿ ಕೊರೊನಾ ಜನರನ್ನು ತಂದು ಬಿಟ್ಟಿದೆ. ಮನಿಷಾ ಅವರ ಕೊನೆಯ ಸಂದೇಶದೊಳಗೆ ಅದೆಷ್ಟು ನೋವಿನ ಧ್ವನಿಯಿತ್ತೋ ಗೊತ್ತಿಲ್ಲ. ಆದರೆ ಅವರ ಕೊನೆಯ ಸಂದೇಶ ಜನರ ಎದೆಗೆ ನಾಟಿದೆ. ಹನಿ ಕಣ್ಣೀರು ಚಿಮ್ಮಿಸಿದೆ.

ಇತ್ತೀಚಿನ ಸುದ್ದಿ