ಶಿರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ–ಪೋಷಕರಿಗೆ ಶೈಕ್ಷಣಿಕ ಪ್ರೇರಣಾ ಶಿಬಿರ
ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡವಿನಕೋಣೆ ಶಿರೂರು ಹಾಗೂ ನಮ್ಮ ನಾಡ ಒಕ್ಕೂಟ (ರಿ) ಬೈಂದೂರು ಘಟಕ ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡವಿನಕೋಣೆ ಶಿರೂರಿನಲ್ಲಿ ವಿದ್ಯಾರ್ಥಿ-ಪೋಷಕರಿಗೆ ಪ್ರೇರಣಾ ಶಿಬಿರ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಕಚ್ಚಿ ಮಹಮ್ಮದ್ ಮುಸ್ತಾಕ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಶಾಲೆಯ ಮುಖ್ಯೊಪಾಧ್ಯಾಯರಾದ ಎಸ್. ಆನಂದ ಮೊಗವೀರ ಸ್ವಾಗತಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳ ನಾಡಗೀತೆ ಮತ್ತು ಪ್ರಾರ್ಥನೆಯಿಂದ ಆರಂಭಗೊಂಡಿತು. ಉದ್ಘಾಟನೆ ನೆರವೇರಿಸಿದ ಶಿರೂರು ಗ್ರಾ.ಪಂ. ಸದಸ್ಯರಾದ ನೂರ್ ಮಹಮ್ಮದ್, ಪ್ರಾಸ್ತಾವಿಕ ಭಾಷಣಕಾರರಾಗಿ ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಉಪಾಧ್ಯಕ್ಷರಾದ ಮಾಮ್ಡು ಇಬ್ರಾಹಿಂ ಸಾಹೇಬ್, ಸಂಪನ್ಮೂಲ ವ್ಯಕ್ತಿಯಾಗಿ ದೂರದ ಮಂಗಳೂರಿನಿಂದ ಪ್ರೇರಕ ಭಾಷಣಕಾರ ರಫೀಕ್ ಮಾಸ್ಟರ್ ಇವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರತ್ಯೇಕವಾಗಿ ಈ ಕಾರ್ಯಾಗಾರವನ್ನು ನಡೆಸಿದರು.
ರಫೀಕ್ ಮಾಸ್ಟರ್ ರವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರೇರಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾ.ಪಂ. ಸದಸ್ಯರುಗಳಾದ ಖಲೀಫಾ ಶಾಹೀನ್, ತಾರಿಸಲ್ಲಾ ಮಹಮ್ಮದ್ ಗೌಸ್, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ಖಜಾಂಚಿಯರಾದ ಸಯ್ಯದ್ ಅಜ್ಮಲ್ ಸಾಹೇಬ್, ಜಿಲ್ಲಾ ಸದಸ್ಯರಾದ ಪರಿ ಹುಸೈನ್ ಸಾಹೇಬ್, ತಾಲೂಕು ಸದಸ್ಯರಾದ ಇಲ್ಯಾಸ್ ಸಾಹೇಬ್ ಬೈಂದೂರು, ನಿವೃತ್ತ ಮುಖ್ಯೊಪಾಧ್ಯಾಯರಾದ ಕಾಪ್ಸಿ ಮಹಮ್ಮದ್ ಗೌಸ್, ಗಣೇಶ್ ಸೇವಾ ಸಂಘ ಹಡವಿನಕೋಣೆಯ ಕಾರ್ಯದರ್ಶಿ ಶ್ರೀ ವೆಂಕಪ್ಪ ಮೇಸ್ತ, ಎಸ್.ಡಿ.ಎಮ್.ಸಿ ಯ ಸರ್ವಸದಸ್ಯರು ಶಾಲಾ ಶಿಕ್ಷಕ ವೃಂದದವರು, ಪೋಷಕರು ಮತ್ತು ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕರಾದ ಧರ್ಮನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರೆ ಅಧ್ಯಾಪಕಿ ಪೂರ್ಣಿಮಾರವರು ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka