ಮೀಸಲಾತಿ ಎಂದರೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನಿರಾಕರಿಸುವುದು ಅಲ್ಲ | ಸುಪ್ರೀಂ ಕೋರ್ಟ್
ನವದೆಹಲಿ : ಮೀಸಲಾತಿ ಎಂದರೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನಿರಾಕರಿಸುವುದು ಅಲ್ಲ, ಮೆರಿಟ್ ಅಭ್ಯರ್ಥಿಗಳು ರಿಸರ್ವ್ ಕೆಟಗರಿಗೆ ಸೇರಿದ್ದರೂ ಸಹ ಅವರಿಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮೀಸಲಾತಿ ಯ ಪರಿಕಲ್ಪನೆಯ ವಿರುದ್ಧ ತೀರ್ಪು ನೀಡಿದೆ.
ಮೀಸಲಾತಿ ಸೌಲಭ್ಯದ ಅನ್ವಯ, ಅರ್ಹತೆಯ ಮೇಲೆ ಗಮನ ಹರಿಸಬೇಕು ಮತ್ತು ಮೆರಿಟ್ ಆಧಾರದ ಮೇಲೆ ಸೀಟು ಗಳಿಸಬೇಕು ಮತ್ತು ಜಾತಿ, ವರ್ಗ ಗಳನ್ನು ಲೆಕ್ಕಿಸದೆ ಅರ್ಹ ಅಭ್ಯರ್ಥಿಗಳಿಗೆ ಸಹಾಯ ಮಾಡಬೇಕು ಎಂದು ತೀರ್ಪು ನೀಡಿದ್ದು, ಮುಕ್ತ ವಿಭಾಗದಲ್ಲಿ ಸ್ಪರ್ಧೆ ಕೇವಲ ಅರ್ಹತೆಯ ಆಧಾರದ ಮೇಲೆ ನಡೆಯಬೇಕು ಎಂದು ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ ಎಂದು ವರದಿಯಾಗಿದೆ.
‘ಮೀಸಲಾತಿಗಳು ಲಂಬ ಮತ್ತು ಸಮತಲ ಎರಡೂ ಸಾರ್ವಜನಿಕ ಸೇವೆಗಳಲ್ಲಿ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ವಿಧಾನವಾಗಿದೆ. ಇವುಗಳನ್ನು ಕಠಿಣ ‘ಸ್ಲಾಟ್’ ಎಂದು ನೋಡಬಾರದು, ಅಲ್ಲಿ ಅಭ್ಯರ್ಥಿಯ ಅರ್ಹತೆಯನ್ನು ಮುಕ್ತ ಸಾಮಾನ್ಯ ವರ್ಗದಲ್ಲಿ ತೋರಿಸಬೇಕೆಂಬ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಯ ಅರ್ಹತೆಯನ್ನು ಪರಿಗಣಿಸಲಾಗುವುದಿಲ್ಲ’ ಎಂದು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿ ಭಟ್ ಮಾತನಾಡಿ, ‘ಜಾತಿ, ಮುಕ್ತ ವರ್ಗಎಲ್ಲರಿಗೂ ಮುಕ್ತವಾಗಿದೆ, ಅಭ್ಯರ್ಥಿಯ ಮೆರಿಟ್ ಆಧಾರದ ಮೇಲೆ ಅವರಿಗೆ ಸ್ಥಾನ, ಅವಕಾಶ ನೀಡಬೇಕೆ ಹೊರತು, ಜಾತಿಯ ಆಧಾರದಲ್ಲಿ ಅಲ್ಲ ಎಂದು ಅವರು ಹೇಳಿದ್ದು, ಮೀಸಲಾತಿ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳದೇ ನೀಡಿರುವ ತೀರ್ಪಿನಂತೆ ಇದು ಕಂಡು ಬಂದಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.