ಎಗ್ ರೈಸ್, ಗೋಬಿ ಮಂಚೂರಿ ಆಸೆ ತೋರಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದ ಕಾಮುಕ ಅರೆಸ್ಟ್! - Mahanayaka
9:00 PM Wednesday 11 - December 2024

ಎಗ್ ರೈಸ್, ಗೋಬಿ ಮಂಚೂರಿ ಆಸೆ ತೋರಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದ ಕಾಮುಕ ಅರೆಸ್ಟ್!

arrest
25/09/2021

ಧಾರವಾಡ: ಎಗ್ ರೈಸ್, ತಿಂಡಿ ಆಸೆ ತೋರಿಸಿ ಭಿಕ್ಷೆ ಬೇಡುತ್ತಿದ್ದ 14 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದು, ಭಿಕ್ಷೆ ಬೇಡುತ್ತಾ ಬದುಕುತ್ತಿದ್ದ ಬಾಲಕಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಸಂತ್ರಸ್ತೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು ಬಳಿಕ ಮಕ್ಕಳ ರಕ್ಷಣಾ ಘಟಕದ ಕೌನ್ಸೆಲಿಂಗ್ ವೇಳೆ ಬಾಲಕಿಯು ತನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ವಿಚಾರವನ್ನು ತಿಳಿಸಿದ್ದಳು. ಬಾಲಕಿಯ ಮಾಹಿತಿ ಆಧರಿಸಿ ಅಧಿಕಾರಿ ಕಮಲಾ ಅವರು, ಧಾರವಾಡ ಉಪನಗರ ಠಾಣೆಗೆ ದೂರು ದಾಖಲಿಸಿದ್ದರು.

ಇದೀಗ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭೆಯಲ್ಲಿ ಕೂಡ ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಪ್ರಕರಣ ಕೂಡ ಬೆಳಕಿಗೆ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ

ಮೊಬೈಲ್ ಟವರ್ ಗೆ ಹತ್ತಿಕೊಂಡ ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಬ್ಯಾಂಕ್ ಗಳ ಚೆಕ್ ಗಳಿಗೆ ಬೆಂಕಿ ಹಚ್ಚಿದ ವಾಟಾಳ್ ನಾಗರಾಜ್

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ತರಕಾರಿ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ

ಅ.3ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶೇ.100ರಷ್ಟು ಹಾಜರಾತಿಗೆ ಅವಕಾಶ | ಬಸವರಾಜ ಬೊಮ್ಮಾಯಿ

ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ

ತುಪ್ಪ ಬೇಕಾ ತುಪ್ಪ ಎಂದು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದ ಮಹಿಳೆಯರು ಅರೆಸ್ಟ್ | ಅಷ್ಟಕ್ಕೂ ಇವರು ಮಾಡ್ತಿದ್ದದ್ದೇನು ಗೊತ್ತಾ?

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ: ಗ್ಯಾಸ್ ಸಿಲಿಂಡರ್ ಸಿಡಿದು ಮೂವರು ಸಾವು

ಇತ್ತೀಚಿನ ಸುದ್ದಿ