ಮೊಟ್ಟೆ ವಿತರಣೆ ಕೈಬಿಡಿ, ಇಲ್ಲವೇ ಪ್ರತ್ಯೇಕ ವೆಜ್- ನಾನ್ ವೆಜ್ ಶಾಲೆ ತೆರೆಯಿರಿ | ದಯಾನಂದ ಸ್ವಾಮೀಜಿ ಒತ್ತಾಯ - Mahanayaka
8:39 AM Saturday 21 - September 2024

ಮೊಟ್ಟೆ ವಿತರಣೆ ಕೈಬಿಡಿ, ಇಲ್ಲವೇ ಪ್ರತ್ಯೇಕ ವೆಜ್- ನಾನ್ ವೆಜ್ ಶಾಲೆ ತೆರೆಯಿರಿ | ದಯಾನಂದ ಸ್ವಾಮೀಜಿ ಒತ್ತಾಯ

veg non veg
16/12/2021

ಧಾರವಾಡ: ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟದ ಪ್ರಧಾನ ಸಂಚಾಲಕ ದಯಾನಂದ ಸ್ವಾಮೀಜಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಮೊಟ್ಟೆ ತಿನ್ನಿಸುವ ಕೆಲಸ ಪ್ರಾರಂಭಿಸಿದೆ. ಸಸ್ಯಾಹಾರಿಗಳ ಆಗ್ರಹಕ್ಕೆ ಸ್ಪಂದಿಸುತ್ತಿಲ್ಲ ನಾಡಿನ ಪೂಜ್ಯರು, ಗಣ್ಯರು ಬೇಡಿಕೊಂಡರೂ ಸರ್ಕಾರ ಕಿವುಡಾಗಿದೆ. ವಿದ್ಯಾ ದೇಗುಲಗಳನ್ನು ಮಿಲ್ಟ್ರಿ ಹೊಟೇಲ್ ಮಾಡಬೇಡಿ, ಮೊಟ್ಟೆಗೆ ಬದಲಾಗಿ ಅನೇಕ ಸಸ್ಯಾಹಾರಿ ಪೌಷ್ಠಿಕಾಂಶ ಪದಾರ್ಥಗಳಿವೆ ಅವುಗಳನ್ನು ಮಕ್ಕಳಿಗೆ ನೀಡಬೇಕು ಎಂದು ಅವರು ಹೇಳಿದರು.

ಈ ಕೂಡಲೇ ಸರ್ಕಾರ ಮೊಟ್ಟೆ ವಿತರಣೆಯನ್ನು ಕೈಬಿಡಬೇಕು. ಇಲ್ಲದಿದ್ದರೆ,  ವೆಜ್ ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ಶಾಲೆ ಮತ್ತು ನಾನ್ ವೆಜ್ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ಮೊಟ್ಟೆ ವಿತರಣೆಯ ಆದೇಶವನ್ನು ಡಿ.19ರೊಳಗೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ, 20ರಂದು  ಬೆಳಗಾವಿ ಸುವರ್ಣ ಸೌಧದ ಬಳಿ ಬೃಹತ್ ಸಂತ ಸಮಾವೇಶ ಮಾಡುತ್ತೇವೆ ಎಮದು ಅವರು ಎಚ್ಚರಿಕೆ ನೀಡಿದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಯವ್ರು ಮಂಚ ಮುರಿಯೋದು, ತೋರಿಸ್ ಬ್ಯಾಡ್ರೀ ಅಂತ ಸ್ಟೇ ತರೋದು | ಸಿಎಂ ಇಬ್ರಾಹಿಂ ವ್ಯಂಗ್ಯ

ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಬೆಂಬಲಿಸುವುದಿಲ್ಲ | ಹೆಚ್.ಡಿ.ಕುಮಾರಸ್ವಾಮಿ

ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಕೇಂದ್ರ ಸಂಪುಟ ಅನುಮೋದನೆ

ಡಾನ್ಸ್ ಮಾಡುತ್ತಿದ್ದ ಮಹಿಳಾ ಕಾರ್ಯಕರ್ತೆಯರ ಮೇಲೆ ನೋಟು ಎಸೆದ ಕಾಂಗ್ರೆಸ್ ಕಾರ್ಯಕರ್ತರು | ವಿಡಿಯೋ ವೈರಲ್

ಯುವ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ನಿಧನ

ಮತಾಂತರ ನಿಷೇಧ ಮಸೂದೆ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಡೆದ ಚರ್ಚೆಗಳೇನು?

ಇತ್ತೀಚಿನ ಸುದ್ದಿ