‘ನಾನು ರಾಜೀನಾಮೆ ನೀಡಲ್ಲ’ ಎಂದ ಮಹಾರಾಷ್ಟ್ರ ಸಿಎಂ ಶಿಂಧೆ: ವದಂತಿ ಸೃಷ್ಟಿ ಮಾಡಿದವರ ವಿರುದ್ಧ ‘ಏಕನಾಥ್’ ಗರಂ
ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಸರ್ಕಾರದಲ್ಲಿ ಎನ್ ಸಿಪಿ ಬಂಡಾಯಗಾರರ ಪ್ರವೇಶದ ಹಿನ್ನೆಲೆಯಲ್ಲಿ ಶಿವಸೇನೆ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇತ್ತ ತಮ್ಮ ರಾಜೀನಾಮೆಯ ಬಗ್ಗೆ ಬಲವಾದ ಊಹಾಪೋಹಗಳ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ ಎಲ್ಲಿಗೂ ಹೋಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಶಿಂಧೆ, ‘ಇದೆಲ್ಲವೂ ವದಂತಿಗಳು. ಅವರು (ಎನ್ ಸಿಪಿ) ತಮ್ಮ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್ ಸಿಪಿಯಲ್ಲಿ ಇತ್ತೀಚೆಗೆ ವಿಭಜನೆಯನ್ನು ಉಲ್ಲೇಖಿಸುವಾಗ ಸಿಎಂ ಶಿಂಧೆ ಅವರು ತಮ್ಮ ರಾಜೀನಾಮೆಯ ವದಂತಿಗಳನ್ನು ಬಲವಾಗಿ ತಳ್ಳಿಹಾಕಿದರು. ಏತನ್ಮಧ್ಯೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ವದಂತಿಗಳನ್ನು ಅವರ ಪಕ್ಷವೂ ಕೂಡಾ ತಳ್ಳಿಹಾಕಿದೆ. ‘ಈ ವದಂತಿಗಳನ್ನು ಉದ್ದೇಶಪೂರ್ವಕವಾಗಿ ಬಿತ್ತಲಾಗುತ್ತಿದೆ’ ಎಂದು ಹೇಳಿದರು.
‘ಈ ನಕಾರಾತ್ಮಕತೆಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತಿದೆ. ಅಜಿತ್ ಪವಾರ್ ಅವರ ಎನ್ ಸಿಪಿ ಬಣವು ಆಡಳಿತಾರೂಢ ಬಿಜೆಪಿ-ಶಿಂಧೆ ಸೇನಾ ಸರ್ಕಾರವನ್ನು ಸೇರುವ ಬಗ್ಗೆ ಶಿಂಧೆ ಬಣದ ಶಾಸಕರು ಅಸಮಾಧಾನಗೊಂಡಿಲ್ಲ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ ಮತ್ತು ಶಿಂಧೆ ಬಣದ ಶಾಸಕ ಉದಯ್ ಸಮಂತ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw