ಮೋದಿ ವರ್ಚಸ್ಸು, ಹಿಂದುತ್ವ ಸಿದ್ಧಾಂತದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಆರೆಸ್ಸೆಸ್ ಪತ್ರಿಕೆ ವಿಶ್ಲೇಷಣೆ
ನವದೆಹಲಿ: ಕರ್ನಾಟಕ ಚುನಾವಣಾ ಫಲಿತಾಂಶದಿಂದ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣಾ ಫಲಿತಾಂಶದಂತೆಯೇ ಬಿಜೆಪಿಗೆ ಸೋಲಾಗಲಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿವೆ. ಈ ನಡುವೆ ಆರೆಸ್ಸೆಸ್ ಮುಖವಾಣಿ ‘ದಿ ಆರ್ಗನೈಸರ್’ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ವಿಶ್ಲೇಷಿಸಿ ಬರೆದಿರುವ ಲೇಖನದಲ್ಲಿ ಮಹತ್ವದ ವಿಚಾರವನ್ನು ಕಂಡುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತರುವುದರಿಂದಷ್ಟೇ ಭವಿಷ್ಯದಲ್ಲಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ದಿ ಆರ್ಗನೈಸರ್ ಅಭಿಪ್ರಾಯಪಟ್ಟಿದೆ.
ಸ್ಥಳೀಯವಾಗಿ ಬಲವಾದ ನಾಯಕತ್ವ ಹಾಗೂ ಯೋಜನೆಗಳ ಪರಿಣಾಮಕಾರಿ ಜಾರಿ ಇಲ್ಲದೇ ಮೋದಿ ಅವರ ವರ್ಚಸ್ಸು, ಹಿಂದುತ್ವ ಸಿದ್ಧಾಂತದಿಂದಲೇ ಚುನಾವಣೆಗಳನ್ನು ಗೆಲ್ಲಲಾಗದು. ರಾಜ್ಯದಲ್ಲಿ ಆಡಳಿತ ಉತ್ತಮವಿದ್ದಾಗ ಮಾತ್ರ ಸಿದ್ಧಾಂತ ಮತ್ತು ನಾಯಕತ್ವವು ಪಕ್ಷಕ್ಕೆ ನಿಜಕ್ಕೂ ಆಸ್ತಿಯಾಗುತ್ತದೆ ಎಂದು ವಿಶ್ಲೇಷಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಅಂಕಿ ಅಂಶಗಳನ್ನೇ 2024ರ ಸಾರ್ವತ್ರಿಕ ಚುನಾವಣೆಗೆ ಹೊಂದಿಸಿ ನೋಡಿದರೆ ಭೀತಿ ಮೂಡುತ್ತದೆ. ಕರ್ನಾಟಕದ ಫಲಿತಾಂಶವು ವಿರೋಧ ಪಕ್ಷಗಳ ನೈತಿಕಸ್ಥೈರ್ಯವನ್ನು ವೃದ್ಧಿಸಿದೆ ಎಂದು ಹೇಳಿದೆ ಎಂದು ಮೇ 23ರ ಸಂಚಿಕೆಯಲ್ಲಿ ಬರೆದ ಸಂಪಾದಕೀಯದಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಸಿದ ಪ್ರಚಾರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಯಿತು. ಚುನಾವಣೆಯಲ್ಲಿ ರಾಷ್ಟ್ರಮಟ್ಟದ ನಾಯಕರ ಪಾತ್ರವನ್ನು ಮಿತಗೊಳಿಸಿ, ಸ್ಥಳೀಯ ಮಟ್ಟದಲ್ಲಿಯೇ ಪ್ರಚಾರವನ್ನು ನಡೆಸಿದ್ದು ಕಾಂಗ್ರೆಸ್‌ಗೆ ಲಾಭವಾಗಿದೆ ಎಂದು ‘ದಿ ಆರ್ಗನೈಸರ್’ ಹೇಳಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw