ದಾಖಲೆ ಇದೆ, ಡಿಲೀಟ್ ಆಗಿದೆ ಎಂದ ಚುನಾವಣಾ ಆಯೋಗ: ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್
![](https://www.mahanayaka.in/wp-content/uploads/2025/02/aa7090f05700401a73248a7e4791b8b928a1d3597e9ed699ab44a7dd6390f813.0.jpg)
ದಾಖಲೆಗಳಿದೆ ಡಿಲೀಟ್ ಆಗಿದೆ ಎಂದು ಸಬೂಬು ನೀಡುವ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಪರಿಶೀಲನೆಯ ಅಗತ್ಯವಿದ್ದಾಗ ವಿಚಾರಣೆಯ ಸಮಯದಲ್ಲಿ ಇವಿಎಂ ಡೇಟಾವನ್ನು ಅಳಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮತ ಎಣಿಕೆ ಮುಗಿದ ಬಳಿಕ ಯಂತ್ರಗಳಿಂದ ಡೇಟಾವನ್ನು ಅಳಿಸಬಾರದು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಇವಿಎಂನಿಂದ ಯಾವುದೇ ಡೇಟಾವನ್ನು ಅಳಿಸಬೇಡಿ ಅಥವಾ ಯಾವುದೇ ಡೇಟಾವನ್ನು ಮರುಲೋಡ್ ಮಾಡಬೇಡಿ ಎಂದು ಹೇಳಿದೆ.
ಚುನಾವಣೆಯ ನಂತರ ಇವಿಎಂ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್ ಬರ್ನ್ ಮಾಡುವ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸಬೇಕು. ಸೋತ ಅಭ್ಯರ್ಥಿ ಸ್ಪಷ್ಟೀಕರಣವನ್ನು ಬಯಸಿದರೆ, ಇಂಜಿನಿಯರ್‌ಗಳು ಪರಿಶೀಲಿಸಿ ಯಾವುದೇ ಟ್ಯಾಂಪರಿಂಗ್ ನಡೆದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಬಹುದು ಎಂದು ಎಂದು ಪೀಠ ತಿಳಿಸಿದೆ. ಇನ್ನು ಕೋರ್ಟ್ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj