ಎಲೆಕ್ಷನ್ ಎಫೆಕ್ಟ್: ಜನರ  ಭಾಗಿಯಿಲ್ಲದ ಮೋದಿ ಬಂಡೀಪುರ ವಿಸಿಟ್!! - Mahanayaka
12:54 AM Friday 20 - September 2024

ಎಲೆಕ್ಷನ್ ಎಫೆಕ್ಟ್: ಜನರ  ಭಾಗಿಯಿಲ್ಲದ ಮೋದಿ ಬಂಡೀಪುರ ವಿಸಿಟ್!!

modi
09/04/2023

ಚಾಮರಾಜನಗರ: ಬಂಡೀಪುರಕ್ಕೆ ಬಂದಿಳಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು  ಕಣ್ತುಂಬಿಕೊಳ್ಳುವ ಅವಕಾಶದಿಂದ ಅಭಿಮಾನಿಗಳು  ವಂಚಿತರಾಗಿದ್ದಾರೆ.

ಹೌದು…,  ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಜನರ ಪ್ರವೇಶವನ್ನು ಗುಂಡ್ಲುಪೇಟೆಯ ಊಟಿ ಗೇಟ್ ನಲ್ಲೇ ತಡೆಯಲಾಗುತ್ತಿದೆ. ಮೋದಿ ಅವರೂ ಗುಂಡ್ಲುಪೇಟೆಗೆ ಬಂದರೂ ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರುತ್ತಿಲ್ಲ.

ಇನ್ನು, 15 ಕಿಮೀ ಸಫಾರಿ ನಡೆಸಲಿರುವ ಪ್ರಧಾನಿ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ, ಅಂಚೆ ಚೀಟಿ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಪಿಎಂಗೆ ಸಾಥ್ ಕೊಡಲಿದ್ದಾರೆ.


Provided by

ಬಂಡೀಪುರಕ್ಕೆ ಬಂದಿಳಿದ ಪಿಎಂ: ಅರಣ್ಯ ಇಲಾಖೆ ಧಿರಿಸಿನಲ್ಲಿ ಮಿಂಚಿದ ನಮೋ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದಾರೆ.

ಎರಡು ಭದ್ರತಾ ಪಡೆ ಹೆಲಿಕಾಪ್ಟರ್ ಸೇರಿದಂತೆ ಮೂರು ಹೆಲಿಕಾಪ್ಟರ್ ನಲ್ಲಿ ಬಂಡೀಪುರಕ್ಕೆ ಬಂದಿದ್ದು ಬಂಡೀಪುರ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್ ನ್ನು ನಮೋ ಹಾಕುವ ಮೂಲಕ ಮಿಂಚಿದ್ದಾರೆ.

ಓಪನ್ ಜೀಪಿನಲ್ಲಿ ನಮೋ ಸಫಾರಿ ನಮೋ- ಹುಲಿ ದರ್ಶನ ಮಾಡಿದ ಪ್ರಧಾನಿ!?

ಚಾಮರಾಜನಗರ: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಡಿದ್ದು ಓಪನ್ ಜೀಪ್ ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ.

ಓಪನ್ ಜೀಪಿನಲ್ಲಿ ಸಫಾರಿ ನಡೆಸಿರುವ ನರೇಂದ್ರ ಮೋದಿ ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮಿಂಚಿದ್ದಾರೆ‌. ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು ಸದ್ಯ ಸಫಾರಿ ಮುಗಿಸಿ ತಮಿಳುನಾಡಿನ ತೆಪ್ಪಕಾಡಿಗೆ ಭೇಟಿ ಕೊಡುತ್ತಿದ್ದಾರೆ.

ಸಫಾರಿ ವೇಳೆ ಹುಲಿಯನ್ನು ಮೋದಿ ನೋಡಿದರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ‌. ತೆಪ್ಪಕಾಡಿನಲ್ಲಿ ಬೊಮ್ಮ-ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿ ಸನ್ಮಾನಿಸಲಿದ್ದಾರೆ.

ಹುಲಿ ಮುಂದೆ ಫೋಟೊ ಕ್ಲಿಕ್ಕಿಸಿಕೊಂಡ ನರೇಂದ್ರ ಮೋದಿ

ಬಂಡೀಪುರ ಸಫಾರಿ ಆರಂಭಕ್ಕೂ ಮುನ್ನ ಟೈಗರ್ ಚಿತ್ರದ ಎದುರು ಫೋಟೋಗೆ ಪೋಸ್. ಬಂಡೀಪುರ ಹಳೇ ಸಫಾರಿ ಕ್ಯಾಂಪಸ್ ನಲ್ಲಿದ್ದ ಹುಲಿ ಚಿತ್ರದ ಎದುರು ಮೋದಿ ಫೋಟೋ

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ