ಚಿಕ್ಕಮಗಳೂರು: ಮತ ಚಲಾಯಿಸಿದ 80ರ ವೃದ್ಧೆ: ಒಂದೆಡೆ ಚುನಾವಣೆ ಉತ್ಸಾಹ, ಮತ್ತೊಂದೆಡೆ ಮಳೆಯ ಭೀತಿ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಇಂದು ಬೆಳಗ್ಗಿನಿಂದಲೇ ಮತದಾನ ಆರಂಭವಾಗಿದೆ. ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳು ರಂಭಾಪುರಿ ಮಠದ ಬೂತ್ ನಲ್ಲಿ ಮತದಾನ ಮಾಡಿದರು. ಶ್ರೀಗಳು ಮೊದಲ ಮತದಾನ ಮಾಡುವ ಮೂಲಕ ಮತದಾನಕ್ಕೆ ಚಾಲನೆ ನೀಡಿದರು.
80 ವರ್ಷದ ವೃದ್ಧೆಯಿಂದ ಮತದಾನ:
ಸಿ.ಟಿ.ರವಿ ಬೂತ್ ನಲ್ಲಿ ಮೊದಲ ಮತದಾನವನ್ನು 80 ವರ್ಷದ ವೃದ್ಧೆ ಕಣ್ಣಮ್ಮ ಅವರು ಮಾಡಿದರು. ಇವರು ಚಿಕ್ಕಮಗಳೂರು ನಗರದಲ್ಲಿ ತರಕಾರಿ ಮಾರಾಟ ಮಾಡುವ ವೃದ್ಧೆಯಾಗಿದ್ದಾರೆ. ಮತದಾನಕ್ಕೆ ಅಜ್ಜಿ ತೋರಿದ ಉತ್ಸಾಹಕ್ಕೆ ಅಧಿಕಾರಿಗಳು ಫಿದಾ ಆಗಿದ್ದಾರೆ.
ಮಳೆಯ ಭೀತಿ:
ಮಲೆನಾಡಲ್ಲಿ ಬೆಳ್ಳಂ ಬೆಳಗ್ಗೆಯೇ ಮತದಾನ ಚುರುಕುಗೊಂಡಿದೆ. ಮತದಾನ ಮಾಡಲು ಮತಗಟ್ಟೆ ಮುಂದೆ ಮತದಾರರು ಸಾಲುಗಟ್ಟಿ ನಿಂತರು. ಒಂದೆಡೆ ಚುನಾವಣೆ ಉತ್ಸಾಹ, ಮತ್ತೊಂದೆಡೆ ಮಳೆಯ ಭೀತಿಯ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಮತ ಕೇಂದ್ರಕ್ಕೆ ಮತದಾರರು ಆಗಮಿಸಿದರು.
ನಿನ್ನೆ ಮಧ್ಯಾಹ್ನದ ಬಳಿಕ ಜಿಲ್ಲಾಧ್ಯಂತ ಧಾರಾಕಾರ ಮಳೆ ಸುರಿದಿತ್ತು. ಇಂದು ಮತ್ತೆ ಮಳೆ ಸುರಿಯುವ ಆತಂಕದಿಂದ ಮತ ಕೇಂದ್ರಕ್ಕೆ ಬೇಗನೇ ಮತದಾರರು ಧಾವಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw