ಕಾವೇರಿದ ಎಲೆಕ್ಷನ್ ಅಖಾಡ: ಹರ್ಯಾಣದಲ್ಲಿ ಜಾತಿ ರಾಜಕೀಯ ಬಲು ಜೋರು
ಹರಿಯಾಣದ ವಿಧಾನಸಭಾ ಚುನಾವಣೆಗೆ ರಂಗ ಸಜ್ಜುಗೊಳ್ಳುತ್ತಿದ್ದು ಎಲ್ಲ ಪಕ್ಷಗಳು ಜಾಟ್ ಸಮುದಾಯವನ್ನು ಓಲೈಸುವ ಉಮೇದಿನಲ್ಲಿದೆ. ಹರಿಯಾಣದ ಚುನಾವಣೆಯು ಜಾತಿಯ ಮೇಲೆಯೇ ನಡೆಯುತ್ತಿದೆ. ಹರಿಯಾಣದ ಒಟ್ಟು ಜನಸಂಖ್ಯೆಯ ಪೈಕಿ 27% ಕೇವಲ ಜಾಟ್ ಸಮುದಾಯವೇ ಇದ್ದು ಇದು ಬಹುದೊಡ್ಡ ಸಮುದಾಯವಾಗಿ ಗುರುತಿಸಿಕೊಂಡಿದೆ.
ಒಟ್ಟು ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ಜಾಟ್ ಸಮುದಾಯ ನಿರ್ಣಾಯಕವಾಗಲಿದೆ. ಈ ಬಾರಿ ಜಾಟ್ ಸಮುದಾಯ ತಮ್ಮ ಕೈ ಹಿಡಿಯುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಅಗ್ನಿಪತ್ ಯೋಜನೆ, ರೈತರ ಪ್ರತಿಭಟನೆ, ಕುಸ್ತಿಪಟುಗಳ ಪ್ರತಿಭಟನೆ ಮುಂತಾದವುಗಳು ಜಾಟ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು ಈ ಬಾರಿ ಅವರು ಬಿಜೆಪಿಯನ್ನು ಕೈ ಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಜಾಟ್ ಸಮುದಾಯದ ಇನ್ನೊರ್ವ ಜಾಟ್ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡದೇ ಇರುವುದು ಕೂಡ ಜಾಟ್ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ 2019ರಲ್ಲಿ ಬಿಜೆಪಿ ಜಾಟ್ ಸಮುದಾಯದ 19 ಮಂದಿಗೆ ಟಿಕೆಟ್ ನೀಡಿತ್ತು.
ಈ ಬಾರಿ 16 ಮಂದಿಗಷ್ಟೇ ಟಿಕೇಟ್ ನೀಡಿದೆ. ಈ ಜಾಟ್ ಸಮುದಾಯದ ಮತಗಳ ಜೊತೆಗೆ ಮುಸ್ಲಿಂ ಸಮುದಾಯವೂ ತಮ್ಮ ಕೈ ಹಿಡಿಯುತ್ತದೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth