ರಣ ಗಾಳಿಗೆ ಯುವಕನ ತಲೆಗೆ ಮುರಿದು ಬಿದ್ದ ವಿದ್ಯುತ್ ಕಂಬ: ಅರ್ಧಕ್ಕೆ ಮುರಿದು ಬಿದ್ದ 66 ಕೆ.ವಿ. ವಿದ್ಯುತ್ ಟವರ್
ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದೆ. ಮಲೆನಾಡಲ್ಲಿ ಬೀಸ್ತಿರೋ ರಣ ಗಾಳಿಯಿಂದ ವಿದ್ಯುತ್ ಕಂಬವೊಂದು ಮುರಿದು ಯುವಕನ ತಲೆಯ ಮೇಲೆ ಬಿದ್ದಿದೆ.
ಯುವಕ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಕಂಬ ತಲೆ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಯುವಕನಿಗೆ ಗಂಭೀರವಾಗಿ ಗಾಯವಾಗಿದೆ.
ಮೂಡಿಗೆರೆ ತಾಲೂಕಿನ ತುಂಬರಗಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಿವೀತ್ ಗಾಯಗೊಂಡ ಯುವಕನಾಗಿದ್ದಾನೆ. ಬಸ್ ಇಳಿದು ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಅರ್ಧಕ್ಕೆ ಮುರಿದು ಬಿದ್ದ 66 ಕೆ.ವಿ. ವಿದ್ಯುತ್ ಟವರ್:
ಚಿಕ್ಕಮಗಳೂರಿನಲ್ಲಿ ಮಳೆ ತಗ್ಗಿದ್ರು ತಗ್ಗದ ರಣ ಗಾಳಿ ಬೀಸುತ್ತಲೇ ಇದೆ. ಇದೀಗ ಭಾರೀ ಗಾಳಿಗೆ ಬೃಹತ್ ವಿದ್ಯುತ್ ಕಂಬವೊಂದು ಮುರಿದು ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಆಮೆಕಟ್ಟೆ ಬಳಿ ನಡೆದಿದೆ.
66 ಕೆ.ವಿ. ವಿದ್ಯುತ್ ಟವರ್ ಅರ್ಧಕ್ಕೆ ಮುರಿದು ಬಿದ್ದ ಪರಿಣಾಮ ಆಲ್ದೂರು ಹೋಬಳಿಯ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಬಂದ್ ಆಗಿದೆ. ಇದರಿಂದಾಗವಿ ಎರಡು ದಿನಗಳ ಕಾಲ ಕತ್ತಲಲ್ಲಿ ಮಲೆನಾಡ ಕುಗ್ರಾಮಗಳು ಕಳೆಯುವಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: