ಮರಗಸಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್: ಮರದಲ್ಲೇ ಪ್ರಾಣ ಬಿಟ್ಟ ಕಾರ್ಮಿಕ
ಚಿಕ್ಕಮಗಳೂರು : ಸಿಲ್ವರ್ ಮರಕ್ಕೆ ಮರಗಸಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲು ಕಾರ್ಮಿಕ ಮರದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಪ್ಪ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮರ ನೇರವಾಗಿ ಬೆಳೆಯಲೆಂದು ಸಿಲ್ವರ್ ಮರಕ್ಕೆ ಮರಗಸಿ ಮಾಡಲಾಗುತ್ತಿತ್ತು.
ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಮರಕ್ಕೆ ಸ್ಪರ್ಶಿಸಿದ್ದು, ಈ ವೇಳೆ ಮರದಲ್ಲಿದ್ದ ಕಾರ್ಮಿಕನಿಗೆ ಶಾಕ್ ತಗುಲಿ ಮರದಲ್ಲೇ ಕಾರ್ಮಿಕ ಪ್ರಾಣ ಬಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಅನ್ಯಾಯವಾಗಿ ಕಾರ್ಮಿಕನ ಪ್ರಾಣ ಬಲಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: