ಪಂಚರ್ ಆದ ಲಾರಿ ಮೇಲೆ ದಾಳಿ ಮಾಡಿ ಮುಸುಕಿನ ಜೋಳ ಗುಳುಂ ಮಾಡಿದ ಆನೆ
ಚಾಮರಾಜನಗರ: ಪಂಚರ್ ಆಗಿ ನಿಂತಿದ್ದ ಲಾರಿ ಮೇಲೆ ಆನೆ ದಾಳಿ ನಡೆಸಿ ಮುಸುಕಿನಜೋಳವನ್ನು ಒಂದು ತಾಸಿಗೂ ಹೆಚ್ಚು ಕಾಲ ಗುಳುಂ ಮಾಡಿರುವ ಕರ್ನಾಟಕ ಹಾಗೂ ತಮಿಳುನಾಡು ಗಡಿಯಾದ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ.
ಮುಸುಕಿನಜೋಳ ಹೊತ್ತು ತಮಿಳುನಾಡಿಗೆ ಸಾಗಿಸುತ್ತಿದ್ದ ಲಾರಿ ಪಂಚ್ಚರ್ ಆದ ಪರಿಣಾಮ ರಸ್ತೆಬದಿಯೇ ನಿಲ್ಲಿಸಿ ಮೆಕಾನಿಕ್ ಕರೆತರಲು ಚಾಲಕ ತೆರಳಿದ್ದ ವೇಳೆ ಲಗ್ಗೆ ಇಟ್ಟ ಸಲಗವೊಂದು ಜೋಳವನ್ನು ಮೆದ್ದಿದೆ.
ಇನ್ನು, ಆನೆ ಭೋಜನದ ಹಸಿವಿನಿಂದ ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಬಳಿಕ ಅರಣ್ಯ ಇಲಾಖೆಯು ಕಾಡಿಗೆ ಆನೆಯನ್ನು ಅಟ್ಟಿದ್ದಾರೆ. ಇನ್ನು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw