ಕಾರ್ಮಿಕರತ್ತ ನುಗ್ಗಿದ ಒಂಟಿ ಸಲಗ: ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಓಡಿದ ಕಾರ್ಮಿಕರು

ಚಿಕ್ಕಮಗಳೂರು: ಆನೆ ಕಂಡು ಮಕ್ಕಳನ್ನ ಎತ್ತಿಕೊಂಡು ಕಾರ್ಮಿಕರು ಪ್ರಾಣ ಭಯದಿಂದ ಓಡಿದ ಘಟನೆ ಮೂಡಿಗೆರೆ–ಬೇಲೂರು ಗಡಿ ಮಲಸಾವರ ಬಳಿಯ ಬಕ್ರವಳ್ಳಿಯಲ್ಲಿ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ಮಿಕರತ್ತ ಒಂಟಿ ಸಲಗ ನುಗ್ಗಿದೆ. ಕಾರ್ಮಿಕರ ಜೊತೆಗೆ ಪುಟ್ಟ ಮಕ್ಕಳು ಕೂಡ ಇದ್ದರು. ಈ ವೇಳೆ ಏನು ಮಾಡಬೇಕು ಎಂದು ತೋಚದೇ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ಓಡಿದ್ದಾರೆ.
ಒಂಟಿ ಸಲಗದ ದಾಳಿಯಿಂದ ಹತ್ತಾರು ಕಾರ್ಮಿಕರು, ಮಕ್ಕಳು ಜಸ್ಟ್ ಮಿಸ್ ಆಗಿದ್ದಾರೆ. ಕಾಫಿತೋಟದ ಕಾರ್ಮಿಕರತ್ತ ಕಾಡಾನೆ ನುಗ್ಗಿದ್ದು, ಕಾರ್ಮಿಕರು ಓಡಿದಂತೆ ಹಿಂದೆಯೇ ಒಂಟಿ ಸಲಗ ಅಟ್ಟಾಡಿಸಿಕೊಂಡು ಬಂದಿದೆ.
ಹತ್ತಾರು ಕಾರ್ಮಿಕರು ಆತಂಕದಿಂದ ಕೂಗಾಡುತ್ತಾ ಪ್ರಾಣ ಉಳಿಸಿಕೊಳ್ಳಲು ಎದ್ವೋ–ಬಿದ್ವೋ ಅಂತ ಓಡಿದ್ದಾರೆ. ಕಾಡಾನೆ ದಾಳಿಯಿಂದಾಗಿ ಪಾಳಿ ತೋಟದ ಕಾರ್ಮಿಕರು ನಿರಂತರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಸಾವನ್ನು ಕಣ್ಣಮುಂದೆಯೇ ಕಂಡಿದ್ದು, ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: