ಸರ್ಕಾರಿ ಬಸ್ ಗೆ ಅಡ್ಡನಿಂತ ಒಂಟಿ ಸಲಗ: ಕೊನೆಗೆ ಆಗಿದ್ದೇನು?
ಚಿಕ್ಕಮಗಳೂರು: ಒಂಟಿ ಸಲಗವೊಂದು ಕೆಎಸ್ ಆರ್ ಟಿಸಿ ಬಸ್ ಗೆ ಅಡ್ಡನಿಂತ ಘಟನೆ ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು–ಮೂಡಿಗೆರೆ ರಸ್ತೆಯ ಕೊಲ್ಲಿಬೈಲ್ ನ ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಹೆಗ್ಡೆ ವನದ ಬಳಿ ಆನೆ ಏಕಾಏಕಿ ರಸ್ತೆಗೆ ಅಡ್ಡವಾಗಿ ಬಂದಿದ್ದು, ಬಸ್ಸಿಗೆ ಎದುರಾಗಿ ನಿಂತಿದೆ.
ಆನೆಯನ್ನು ಕಂಡು ಬಸ್ ಚಾಲಕ ಬಸ್ ನಿಲ್ಲಿಸಿದ್ದು, ಈ ವೇಳೆ ಪ್ರಯಾಣಿಕರು ಆತಂಕದಿಂದ ಕೂಗಿಕೊಂಡಿದ್ದಾರೆ. ಜನರ ಕೂಗಾಟ ಕೇಳಿ ಗಲಿಬಿಲಿಗೊಂಡ ಆನೆ ರಸ್ತೆ ಬದಿಯಿಂದ ಸ್ಥಳದಿಂದ ಓಡಿ ಹೋಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw