ಉಮಾಮಹೇಶ್ವರಿ  ಆನೆಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ  5 ಲಕ್ಷ  ಆರೋಗ್ಯ ವಿಮೆ! - Mahanayaka
10:36 PM Saturday 14 - December 2024

ಉಮಾಮಹೇಶ್ವರಿ  ಆನೆಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ  5 ಲಕ್ಷ  ಆರೋಗ್ಯ ವಿಮೆ!

umamaheshwari elephant
02/06/2023

ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರಸ್ವಾಮಿ ದೇವಾಲಯದ ಆನೆ ಉಮಾ ಮಹೇಶ್ವರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ ವಿಮೆ ಮಾಡಿಸಿದೆ.

5 ಲಕ್ಷ ಮೌಲ್ಯದ ವಿಮೆ ಮಾಡಿಸಲಾಗಿದ್ದು, ವರ್ಷಕ್ಕೆ 11 ಸಾವಿರ ರೂ. ನ್ನು ಪ್ರಾಧಿಕಾರ ಪಾವತಿಸಲಿದೆ. ವಿಮೆ ಮಾಡಿಸುವ ಉದ್ದೇಶದಿಂದ ಗುರುವಾರ ಅಧಿಕಾರಿಗಳು 48 ವರ್ಷದ ಹೆಣ್ಣಾನೆಯ ಆರೋಗ್ಯ ಆರೋಗ್ಯ ತಪಾಸಣೆ ಮಾಡಿಸಿದರು. ಪಶುವೈದ್ಯರು ತಪಾಸಣೆ ಮಾಡಿದ್ದು, ಆನೆಯು ಆರೋಗ್ಯದಿಂದ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅರಣ್ಯ ಇಲಾಖೆಯ ನಿಯಮದ ಪ್ರಕಾರ ಸಾಕಾನೆಗೆ ವಿಮೆ ಮಾಡಿಸಬೇಕು. ಎರಡೂವರೆ ವರ್ಷಗಳಿಂದ ವಿಮೆ ಮಾಡಿರಲಿಲ್ಲ. ಈಗ ಆರೋಗ್ಯ ತಪಾಸಣೆ ಮಾಡಿಸಿ, ವಿಮೆ ಮಾಡಿದ್ದೇವೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ಮಾಹಿತಿ ನೀಡಿದ್ದಾರೆ.

ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಉಮಾಮಹೇಶ್ವರಿ ಆನೆ ಭಕ್ತರಿಗೂ ಅಚ್ಚುಮೆಚ್ಚಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ