ಘೋರ ಘಟನೆ: ಆನೆಯ ಕಿವಿಗೆ ಬೆಂಕಿ ಹಚ್ಚಿ ಭೀಕರ ಹತ್ಯೆ
23/01/2021
ಚೆನ್ನೈ: ತಮಿಳುನಾಡಿನ ಮುದುಮಲೈ ಹುಲು ಅಭಯಾರಣ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಆನೆಯನ್ನು ಓಡಿಸುವ ಭರದಲ್ಲಿ ಆನೆಗೆ ಹಚ್ಚಿದ ಟಯರ್ ಎಸೆದಿದ್ದಾರೆ.
ಬೆಂಕಿ ಹತ್ತಿಕೊಂಡ ಟಯರ್ ನಿಂದಾಗಿ ಆನೆಯ ತಲೆಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಇದರಿಂದಾಗಿ ಆನೆ 3 ದಿನಗಳ ಕಾಲ ನರಳಿ ಸಾವನ್ನಪ್ಪಿದೆ. ಆನೆಯನ್ನು ಓಡಿಸಲು ಬೆಂಕಿ ಎಸೆಯಲಾಗಿದೆ. ಈ ವೇಳೆ ಬೆಂಕಿಯು ಆನೆಯ ಕಿವಿಗೆ ತಾಗಿದೆ. ಬೆಂಕಿ ಕಂಡು ಆನೆ ಓಡಲಾರಂಭಿಸಿದ್ದು, ಬೆಂಕಿ ಆನೆಯ ಕಿವಿಯನ್ನು ವ್ಯಾಪಿಸಿದೆ.
ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆನೆಯ ಬೆನ್ನಿಗೂ ತೀವ್ರವಾದ ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬೆಂಕಿ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಆನೆಯನ್ನು ಜ.19ರಂದು ವೈದ್ಯಕೀಯ ಚಿಕಿತ್ಸೆಗಾಗಿ ತೆಪ್ಪಕಾಡು ಆನೆ ಶಿಬಿರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಆನೆ ಸಾವನ್ನಪ್ಪಿದೆ.