ಘೋರ ಘಟನೆ: ಆನೆಯ ಕಿವಿಗೆ ಬೆಂಕಿ ಹಚ್ಚಿ ಭೀಕರ ಹತ್ಯೆ

23/01/2021

ಚೆನ್ನೈ: ತಮಿಳುನಾಡಿನ ಮುದುಮಲೈ ಹುಲು ಅಭಯಾರಣ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಆನೆಯನ್ನು ಓಡಿಸುವ ಭರದಲ್ಲಿ ಆನೆಗೆ ಹಚ್ಚಿದ ಟಯರ್ ಎಸೆದಿದ್ದಾರೆ.

ಬೆಂಕಿ ಹತ್ತಿಕೊಂಡ ಟಯರ್ ನಿಂದಾಗಿ ಆನೆಯ ತಲೆಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು,  ಇದರಿಂದಾಗಿ ಆನೆ  3 ದಿನಗಳ ಕಾಲ ನರಳಿ ಸಾವನ್ನಪ್ಪಿದೆ. ಆನೆಯನ್ನು ಓಡಿಸಲು ಬೆಂಕಿ ಎಸೆಯಲಾಗಿದೆ. ಈ ವೇಳೆ ಬೆಂಕಿಯು ಆನೆಯ ಕಿವಿಗೆ ತಾಗಿದೆ. ಬೆಂಕಿ ಕಂಡು ಆನೆ ಓಡಲಾರಂಭಿಸಿದ್ದು, ಬೆಂಕಿ ಆನೆಯ ಕಿವಿಯನ್ನು ವ್ಯಾಪಿಸಿದೆ.

ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆನೆಯ ಬೆನ್ನಿಗೂ ತೀವ್ರವಾದ ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬೆಂಕಿ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಆನೆಯನ್ನು ಜ.19ರಂದು ವೈದ್ಯಕೀಯ ಚಿಕಿತ್ಸೆಗಾಗಿ ತೆಪ್ಪಕಾಡು ಆನೆ ಶಿಬಿರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಆನೆ ಸಾವನ್ನಪ್ಪಿದೆ.

ಇತ್ತೀಚಿನ ಸುದ್ದಿ

Exit mobile version