ವಶಪಡಿಸಿಕೊಂಡ ಮದ್ಯವನ್ನು ಇಲಿ ಹಾಳು ಮಾಡಿದೆ ಎಂದು ಹೇಳಿ ಸಿಕ್ಕಿ ಹಾಕಿಕೊಂಡ ಪೊಲೀಸರು! - Mahanayaka
5:59 AM Thursday 12 - December 2024

ವಶಪಡಿಸಿಕೊಂಡ ಮದ್ಯವನ್ನು ಇಲಿ ಹಾಳು ಮಾಡಿದೆ ಎಂದು ಹೇಳಿ ಸಿಕ್ಕಿ ಹಾಕಿಕೊಂಡ ಪೊಲೀಸರು!

mouse police
29/03/2021

ಇಟಾ: ಅಕ್ರಮ ಮದ್ಯ ಎಂದು ವಶಪಡಿಸಿಕೊಂಡಿದ್ದ ಮದ್ಯದ ಬಾಟಲಿಗಳು ನಾಪತ್ತೆಯಾಗಿದ್ದು, ಈ ಸಂಬಂಧ ಇದೀಗ ಪೊಲೀಸ್ ಅಧಿಕಾರಿಗಳು ನೀಡಿದ ಹೇಳಿಕೆ, ಹಲವು ಸಂಶಯಕ್ಕೆ ಕಾರಣವಾಗಿದ್ದು, ಪೊಲೀಸರ ವಿರುದ್ಧವೇ ಇದೀಗ ತನಿಖೆ ಆರಂಭವಾಗಿದೆ.

ಉತ್ತರ ಪ್ರದೇಶದ ಇಟಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದ 1,400ಕ್ಕೂ ಅಧಿಕ ಮದ್ಯದ ಪೆಟ್ಟಿಗೆಗಳು ನಾಪತ್ತೆಯಾಗಿವೆ.  ಈ ಬಗ್ಗೆ ಠಾಣೆಯ ಜನರಲ್ ಡೈರಿಯಲ್ಲಿ 239 ಪೆಟ್ಟಿಗೆಗಳನ್ನು ಇಲಿಗಳು ಹಾಳು ಮಾಡಿವೆ ಎಂದು ಉಲ್ಲೇಖಿಸಲಾಗಿತ್ತು.

ಡೈರಿಯಲ್ಲಿರುವ ಮಾಹಿತಿಯು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣವಾಗಿದೆ ಎಂದು ಹೇಳಲಾಗಿತ್ತು.  ಈ ಸಂಬಂಧ ಠಾಣಾಧಿಕಾರಿ ಇಂದ್ರೇಶಪಾಲ್ ಸಿಂಗ್ ಮತ್ತು ಗುಮಾಸ್ತ ರಿಷಾಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇಟಾ ಎಸ್ ಪಿ ಉದಯಶಂಕರ್ ಸಿಂಗ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ