ಇಲ್ಲಿ ಹತ್ಯೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ: ಎಸ್ ಡಿಪಿಐ ಆರೋಪ

sdpi
13/08/2022

ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಯನ್ನು ಎಸ್ ಡಿಪಿಐ ಪಕ್ಷ ಖಂಡಿಸುತ್ತದೆ. ಸದ್ಯ ಮೂರು ಕೊಲೆ ಆರೋಪಿಗಳ ಬಂಧನ ಆಗಿದೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನಾವು ಕೋರುತ್ತೇವೆ. ಆದರೆ, ಇಲ್ಲಿ ಹತ್ಯೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ  ಹೇಳಿದರು.

ಮಂಗಳೂರಿನಲ್ಲಿ ಎಸ್ ಡಿಪಿಐ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಪ್ರದೇಶದಲ್ಲಿ ಎರಡು ಕೊಲೆ ಆದರೂ ಒಂದು ಕೊಲೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ, ಇನ್ನೊಂದರ ಬಗ್ಗೆ ಕ್ಷುಲ್ಲಕ ಕಾರಣಕ್ಕಾಗಿ ಎಂದು ಬಿಟ್ಟಿದ್ದಾರೆ. ಪ್ರವೀಣ್ ಹತ್ಯೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಎನ್ ಐಎಗೆ ನೀಡ್ತಾರೆ. ಅದೇ ಮಸೂದ್ ಹತ್ಯೆಯಲ್ಲಿ ಇಷ್ಟು ಕಾಳಜಿ ಯಾಕಿಲ್ಲ? ಎಂದು ಅವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಯಾವುದೇ ಕೃತ್ಯ ನಡೆದರೂ ಬಿಜೆಪಿಗರ ಬಾಯಲ್ಲಿ ಬರೋ ಹೆಸರೇ ಎಸ್ ಡಿಪಿಐ. ಪ್ರವೀಣ್ ಹತ್ಯೆ ಆರೋಪಿಗಳು ಸ್ಥಳೀಯರೇ ಆಗಿದ್ದಾರೆ. ಆದ್ರೆ ಫಾಝಿಲ್ ಹತ್ಯೆಯಲ್ಲಿ‌ರುವ ಆರೋಪಿಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶದವರು. ಎಲ್ಲಿ ಸಂಘಟಿತವಾಗಿ ಹತ್ಯೆ ನಡೆದಿದೆ ಎಂಬುದನ್ನ ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಲಿ ಎಂದು ಅವರು ಒತ್ತಾಯಿಸಿದರು.

ಪ್ರವೀಣ್ ಆರೋಪಿಗಳಿಗೆ ಮಸೀದಿಯವರು ಬೆಂಬಲಿಸಿದ್ದಾರೆ ಎಂಬ ಪುತ್ತೂರು ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಫಾಝಿಲ್ ಹತ್ಯೆಕೋರರು ಹತ್ಯೆ ಮಾಡಿ ನೇರ ಕಾರಿಂಜೇಶ್ವರ ದೇವಾಲಯಕ್ಕೆ ಹೋಗಿದ್ದಾರೆ. ಇದನ್ನು ಯಾರಾದ್ರೂ ಹೇಳಿದ್ದಾರಾ..? ಎಂದು ಪ್ರಶ್ನಿಸಿದ ಜಲೀಲ್,  ಶಾಸಕರಾಗಿ  ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ನೀವು ಕೇವಲ ಒಂದು ಧರ್ಮಕ್ಕೆ ಶಾಸಕರ..? ಎಂದು ಪ್ರಶ್ನಿಸಿದರು.

ಸುಳ್ಯದಲ್ಲಿ ಒಂದೂವರೆ ವರ್ಷ ಮೊದಲು ಬಂದ್ ಮಾಡಲಾದ ಕಚೇರಿಯಲ್ಲಿ ಮಹಜರು ಎಂದು ಬಿಂಬಿಸ್ತಾರೆ. ಇದು ಯಾವ ರೀತಿಯ ರಾಜಕೀಯ ವ್ಯವಸ್ಥೆ? ನಮಗೆ ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇದೆ. ನಿಮಗೆ ಪೊಲೀಸ್ ‌ಇಲಾಖೆ ಮೇಲೆ ನಂಬಿಕೆ ಇಲ್ಲದಿದ್ದಾರೆ ಬಿಡಿ. ನಮಗೆ ಎನ್ ಐಎಗಿಂತ ಕರ್ನಾಟಕ ಪೊಲೀಸ್ ಮೇಲೆ ನಂಬಿಕೆ ಇದೆ. ಅವರಿಗೆ ತನಿಖೆಗೆ ಸಂಪೂರ್ಣ ಅವಕಾಶ ಕೊಡಿ. ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆ ಮೇಲೆ ತನಿಖೆ ಆಗಲಿ ಎಂದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version