ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಎಲಾನ್ ಮಸ್ಕ್
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಮಸ್ಕ್ ಇಂದು ಟೆಕ್ ಜಗತ್ತಿನಲ್ಲಿ ಅತ್ಯಂತ ಮಾನ್ಯತೆ ಪಡೆದ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. 90ರ ದಶಕದಿಂದ ನ್ಯಾಯಯುತವಾದ ಹೋರಾಟ ಮತ್ತು ಸಾಧಿಸುವ ಛಲದಿಂದಾಗಿ ಇಂದು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಎಲಾನ್ ಮಸ್ಕ್ ಪ್ರಾರಂಭಿಸಿದ ಮೊದಲ ಯೋಜನೆ Zip2. ಇದೊಂದು ಸಾಫ್ಟ್‌ವೇರ್ ಕಂಪನಿ. ಅಂತರ್ಜಾಲ ಆಧಾರಿತ ಪ್ಲಾಟ್‌ಫಾರ್ಮನ್ನು ಅಭಿವೃದ್ಧಿಪಡಿಸಿತ್ತು. ಇದು ಆನ್‌ಲೈನ್ ಸಿಟಿ ಗೈಡ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ವೃತ್ತಪತ್ರಿಕೆ ಪ್ರಕಾಶನ ಉದ್ಯಮಕ್ಕೆ ಪ್ರಯೋಜನವನ್ನು ನೀಡಿತು. 1995 ರಲ್ಲಿ ಸ್ಥಾಪನೆಯಾದ ಈ ಕಂಪನಿಯನ್ನು 1999 ರಲ್ಲಿ ಕಾಂಪ್ಯಾಕ್ ಕಂಪ್ಯೂಟರ್ ಖರೀದಿಸಿತು.
ಇನ್ನು ಟೆಸ್ಲಾ ಷೇರು ಏರಿಕೆ ಟೆಸ್ಲಾ ಷೇರುಗಳು ಒಂದು ತಿಂಗಳಲ್ಲಿ 25 ಪ್ರತಿಶತಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ. ಈ ಕಾರಣದಿಂದಾಗಿ ಒಂದು ತಿಂಗಳಲ್ಲಿ ಅವರ ಸಂಪತ್ತಿನಲ್ಲಿ 29 ಶತಕೋಟಿ ಡಾಲರ್ನಷ್ಟು ಹೆಚ್ಚಳವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw