ಕೈರೋದಲ್ಲಿ ತುರ್ತು ಸಭೆ: ಗಾಝಾ ಪುನರ್ ನಿರ್ಮಿಸಲು ಅರಬ್ ನಾಯಕರ ಪಣ

ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿ ನಡೆದ ತುರ್ತು ಶೃಂಗಸಭೆಯಲ್ಲಿ ಅರಬ್ ನಾಯಕರು ಗಾಝಾ ಪುನರ್ ನಿರ್ಮಾಣ ಯೋಜನೆಯನ್ನು ಅಂಗೀಕರಿಸಿದ್ದಾರೆ.
53 ಶತಕೋಟಿ ಅಮೆರಿಕನ್ ಡಾಲರ್ ವೆಚ್ಚದ ಯೋಜನೆ ಇದಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಫೆಲೆಸ್ತೀನಿಯನ್ನರ ಸಾಮೂಹಿಕ ಸ್ಥಳಾಂತರದ ʼಮಧ್ಯಪ್ರಾಚ್ಯ ರಿವೇರಿಯಾ” ದೃಷ್ಟಿಕೋನದ ಪ್ರಸ್ತಾಪಕ್ಕೆ ಪ್ರತಿಯಾಗಿ ಯೋಜನೆಯನ್ನು ರೂಪಿಸಲಾಗಿದೆ.
ಕೈರೋದಲ್ಲಿ ನಡೆದ ಶೃಂಗಸಭೆಯ ಅಂತ್ಯದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ ಎಂದು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‌ಸಿಸಿ ಹೇಳಿದರು. ಯೋಜನೆಯನ್ನು ಹಮಾಸ್ ಸ್ವಾಗತಿಸಿದ್ದು, ಇಸ್ರೇಲ್ ಟೀಕಿಸಿದೆ.
ಈಜಿಪ್ಟ್ ಪ್ರಸ್ತಾಪಿಸಿದ ʼಗಾಝಾ ಪುನರ್ ನಿರ್ಮಾಣ ಯೋಜನೆʼಯನ್ನು ಅರಬ್ ನಾಯಕರು ಅಂಗೀಕರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಝಾವನ್ನು ಸ್ವಾಧೀನಪಡಿಸಿಕೊಂಡು, ನಾಗರಿಕರನ್ನು ಸ್ಥಳಾಂತರ ಮಾಡಿ, ಆ ಪ್ರದೇಶವನ್ನು ʼಮಧ್ಯಪ್ರಾಚ್ಯದ ರಿವೇರಿಯಾʼ ಆಗಿ ಪರಿವರ್ತಿಸುವುದಾಗಿ ಹೇಳಿದ್ದರು.
ಗಾಝಾಕ್ಕಾಗಿ ಈಜಿಪ್ಟ್‌ನ ಪುನರ್ ನಿರ್ಮಾಣ ಯೋಜನೆಯು 112 ಪುಟಗಳ ದಾಖಲೆಯಾಗಿದ್ದು, ಯುದ್ಧದಿಂದ ನಾಶವಾಗಿರುವ ಗಾಝಾಪಟ್ಟಿಯ ಮರು ಅಭಿವೃದ್ಧಿ ಕುರಿತು ಕರಡು ಚಿತ್ರಣವನ್ನು ಹೊಂದಿದೆ. ವಸತಿ ಕಟ್ಟಡಗಳು, ಉದ್ಯಾನವನಗಳು, ಸಮುದಾಯ ಕೇಂದ್ರಗಳ ವರ್ಣರಂಜಿತ AI ರಚಿತ ಚಿತ್ರಗಳನ್ನು ಒಳಗೊಂಡಿದೆ. ಯೋಜನೆಯು ವಾಣಿಜ್ಯ ಬಂದರು, ತಂತ್ರಜ್ಞಾನ ಕೇಂದ್ರ, ಬೀಚ್‌ಗಳು, ಹೊಟೇಲ್‌ಗಳು ಮತ್ತು ವಿಮಾನ ನಿಲ್ದಾಣವನ್ನು ಒಳಗೊಂಡಿದೆ.
ಈಜಿಪ್ಟ್, ಜೋರ್ಡಾನ್ ಮತ್ತು ಅರಬ್ ರಾಜ್ಯಗಳು ಟ್ರಂಪ್ ಅವರ ಸ್ಥಳಾಂತರ ಮತ್ತು ಗಾಝಾದ ಯುಎಸ್ ಯೋಜನೆಗೆ ಪರ್ಯಾಯವಾಗಿ ʼಪುನರ್ ನಿರ್ಮಾಣ ಯೋಜನೆʼ ರೂಪಿಸಲು ಸುದೀರ್ಘವಾದ ಸಮಾಲೋಚನೆ ನಡೆಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj