ಇಂದು, ಬಾಬಾ ಸಾಹೇಬ್ ಅಂಬೇಡ್ಕರರು ಕಣ್ಣೀರು ಹಾಕಿದ ದಿನ - Mahanayaka

ಇಂದು, ಬಾಬಾ ಸಾಹೇಬ್ ಅಂಬೇಡ್ಕರರು ಕಣ್ಣೀರು ಹಾಕಿದ ದಿನ

ambedkar
18/03/2022

  • ಬಾಲಾಜಿ ಎಂ. ಕಾಂಬಳೆ

ಮಾರ್ಚ್ 18, 1956 ರಂದು ಆಗ್ರಾದ ರಾಮ್‌ ಲೀಲಾ ಮೈದಾನದಲ್ಲಿ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರು ಮಾತನಾಡುತ್ತ, “ನನ್ನ ಸಮಾಜದ ವಿದ್ಯಾವಂತರು ನನಗೆ ಮೋಸ ಮಾಡಿದ್ದಾರೆ” ಎಂದು ಹೇಳಿದರು.

“ಈ ಜನರು ಶಿಕ್ಷಣ ಪಡೆಯುವ ಮೂಲಕ ತಮ್ಮ ಸಮಾಜವನ್ನು ಮುನ್ನಡೆಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನನ್ನ ಸುತ್ತಮುತ್ತ ಸ್ವಾರ್ಥಿಗಳ ಜನಸಂದಣಿ ಹುಟ್ಟಿಕೊಂಡಿದೆ. ಇವರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆಯೇ ಹೊರತು, ಇವರಿಗೆ ತಮ್ಮ ಸಮಾಜದ ಬಡವರ ಬಗ್ಗೆ ಕಾಳಜಿ ಇಲ್ಲ” ಎಂದು ಕಣ್ಣೀರು ಹಾಕಿದರು.

ಇಂದಿಗೂ ಸಹ ಸಮಾಜದ ವಿದ್ಯಾವಂತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ದೊಡ್ಡ ಹುದ್ದೆಗಳ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಅವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳ ಬಗ್ಗೆ ತಿಳಿಯದೆ ಇರುವುದು ದೊಡ್ಡ ದುರಂತವೇ ಸರಿ.

ಇಂದು ವಿದ್ಯಾವಂತರು ಮತ್ತು ನೌಕರಸ್ಥರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾರ್ಗವನ್ನು ಅನುಸರಿಸಬೇಕಾಗಿದೆ. ಮತ್ತು ವಿದ್ಯಾವಂತರಾಗಿ, ಸಂಘಟಿತವಾಗಿ ಹೋರಾಟವನ್ನು ಮುಂದುವರಿಸಬೇಕಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಟ್ಟೆ ಅಂಗಡಿ ಮಾಲಕಿಯನ್ನು 30ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ!

ಕಲ್ಲಂಗಡಿ ಹಣ್ಣು ಕತ್ತರಿಸಿ ಗೆಳತಿಯ ಹುಟ್ಟುಹಬ್ಬ ಆಚರಣೆ: ವಿದ್ಯಾರ್ಥಿಗೆ ಶಿಕ್ಷಕರಿಂದ ಥಳಿತ

ಮಗಳಿಗೆ ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇರುವುದಿಲ್ಲ: ಸುಪ್ರೀಂಕೋರ್ಟ್

ಮುಂದಿನ ತಿಂಗಳಿನಲ್ಲಿ  ಅಪ್ಪಳಿಸಲಿದೆ ಈ ವರ್ಷದ ಮೊದಲ ಚಂಡಮಾರುತ

ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

ಇತ್ತೀಚಿನ ಸುದ್ದಿ