ಇಂದು ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ: ಏನಿದು ಸೌರ ಬಿರುಗಾಳಿ? - Mahanayaka

ಇಂದು ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ: ಏನಿದು ಸೌರ ಬಿರುಗಾಳಿ?

solar storm
12/07/2021

ನವದೆಹಲಿ:  16 ಲಕ್ಷ ಕಿ.ಮೀ. ವೇಗದಲ್ಲಿ  ಸೌರ ಬಿರುಗಾಳಿ ಭೂಮಿಯನ್ನು ಸಮೀಪಿಸುತ್ತಿದ್ದು, ಇಂದು ಭೂಮಿಯನ್ನು  ಅಪ್ಪಳಿಸಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು,  ಜಿಪಿಎಸ್, ನೇವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಹಾಗೂ ಉಪಗ್ರಹ ಟಿವಿ ಸಿಗ್ನಲ್ ಗಳಿಗೆ ಧಕ್ಕೆಯುಂಟು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ನಾಸಾ ಮಾಹಿತಿ ನೀಡಿದೆ ಎಂದು ವರದಿಯಾಗಿದ್ದು,  ಇಂದು ಅಪ್ಪಳಿಸುವ ಬಿರುಗಾಳಿಯು ಸೂರ್ಯನ ವಾತಾವರಣದಲ್ಲಿ ಉಂಟಾಗಿರುವುದರಿಂದ ಸೂರ್ಯನ ಆಯಸ್ಕಾಂತೀಯ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದೆ ಎಂದು ಹೇಳಲಾಗಿದೆ.

ಭೂಮಿಯ ಹೊರಗಿನ ವಾತಾವರಣವನ್ನು ಈ ಸೌರ ಬಿರುಗಾಳಿಯು ಬಿಸಿ ಮಾಡಬಹುದು. ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ತೊಂದರೆಗೆ ಕಾರಣವಾಗಬಹುದಾಗಿದ್ದು ಜೊತೆಗೆ ವಿದ್ಯುತ್ ಲೈನ್‌ಗಳಲ್ಲಿ ಪ್ರವಾಹವು ಅಧಿಕವಾಗಿರಬಹುದು ಎಂದು ನಾಸಾ ಹೇಳಿದೆ ಎನ್ನಲಾಗಿದೆ.

ಈ ಸೌರ ಬಿರುಗಾಳಿಯು ಕೆಲವು ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಇರಲಿದ್ದು, ಭೂಮಿಯ ಮೇಲ್ಮೈ ಹಾಗೂ ವಾತಾವರಣದಲ್ಲಿ ಇದರ ಪರಿಣಾಮವು ಕೆಲವು ದಿನಗಳು ಇರಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ