ಇಂದು ಬಿಎಸ್‍ಪಿ ವರಿಷ್ಠೆ ಮಾಯಾವತಿ ಅವರ ಜನ್ಮದಿನ: ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ - Mahanayaka
3:26 PM Wednesday 5 - February 2025

ಇಂದು ಬಿಎಸ್‍ಪಿ ವರಿಷ್ಠೆ ಮಾಯಾವತಿ ಅವರ ಜನ್ಮದಿನ: ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ

mayawati
15/01/2022

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ವರಿಷ್ಠೆ ಮಾಯಾವತಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಶನಿವಾರ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬಿಎಸ್‌ಪಿ ನಾಯಕಿ ಮಾಯಾವತಿ 66 ನೇ ಹುಟ್ಟುಹಬ್ಬವನ್ನು ಇಂದು ಪಕ್ಷದ ಕಾರ್ಯಕರ್ತರು ಜನಕಲ್ಯಾಣಕಾರಿ ದಿನ ಎಂದು ಆಚರಿಸಲಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ಅವರ ಹೋರಾಟದ ಬದುಕಿನ ಬ್ಲೂ ಬುಕ್ ಮತ್ತು ಬಿಎಸ್‌ಪಿ ಚಳವಳಿಯ ಪಯಣ ಭಾಗ -17 ಮತ್ತು ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಫೆ. 10ರಿಂದ ಉತ್ತರ ಪ್ರದೇಶದ ಚುನಾವಣೆ ಆರಂಭಗೊಳ್ಳಲಿದೆ. ಕೊನೆಯ ಹಂತದ ಚುನಾವಣೆ ಮಾ. 7ರಂದು ನಡೆಯಲಿದೆ. ಮಾ. 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸರ ವೇಷದಲ್ಲಿ ಮನೆಗೆ ದಾಳಿ ನಡೆಸಿ ಚಿನ್ನಾಭರಣ ದೋಚಿದ ಕಳ್ಳರು!

ಫೆ. 1ರಂದು ಕೇಂದ್ರ ಬಜೆಟ್ ಮಂಡನೆ

ನವದೆಹಲಿ: ಹೂವಿನ ಮಾರುಕಟ್ಟೆಯಲ್ಲಿ ಬಾಂಬ್‌ ಪತ್ತೆ

ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ; ರೈಲ್ವೆ ಸಚಿವರ ಭೇಟಿ, ತನಿಖೆಗೆ ಆದೇಶ

ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಳಯ್ಕಲ್ ತಪ್ಪಿತಸ್ಥನಲ್ಲ; ಕೋರ್ಟ್

ಬಾಗ್ದಾದ್: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ

ಇತ್ತೀಚಿನ ಸುದ್ದಿ